ಉಡುಪಿ: ನ.14 ರಿಂದ ‘ಚೈಲ್ಡ್‌ಲೈನ್ ಸೇ ದೋಸ್ತಿ ಸಪ್ತಾಹ’

Update: 2019-11-13 16:19 GMT

ಉಡುಪಿ, ನ.13: ಚೈಲ್ಡ್‌ಲೈನ್ ಇಂಡಿಯಾ ಫೌಂಡೇಶನ್ ವತಿಯಿಂದ ದೇಶದಾದ್ಯಂತ ‘ಚೈಲ್ಡ್‌ಲೈನ್ ಸೇ ದೋಸ್ತಿ’ ಸಪ್ತಾಹ ನಡೆಯುತಿದ್ದು, ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ರೋಟರಿ ಉಡುಪಿ ಇವುಗಳ ಸಹಕಾರದೊಂದಿಗೆ ಚೈಲ್ಡ್‌ಲೈನ್ ಉಡುಪಿ ನ.14 ರಿಂದ 20 ರವರೆಗೆ ಸಪ್ತಾಹವನ್ನು ಉಡುಪಿ ಜಿಲ್ಲೆಯಲ್ಲಿ ಹಮ್ಮಿ ಕೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಬರುವ ಸ್ವಯಂಸೇವಾ ಸಂಸ್ಥೆಯಾಗಿರುವ ಚೈಲ್ಡ್‌ಲೈನ್ ಇಂಡಿಯಾ ಫೌಂಡೇಷನ್‌ನ ‘ಚೈಲ್ಡ್‌ಲೈನ್ 1098’ರ ಜೊತೆಗೆ ದೇಶದ ಸಾಮಾನ್ಯ ನಾಗರಿಕರನ್ನು ಹಾಗೂ ಫಲಾನುಭವಿಗಳನ್ನು ಕೈಜೋಡಿ ಸುವಂತೆ ಮಾಡುವುದು ‘ಚೈಲ್ಡ್‌ಲೈನ್ ಸೇ ದೋಸ್ತಿ’ ಸಪ್ತಾಹದ ಗುರಿಯಾಗಿದೆ ಎಂದವರು ವಿವರಿಸಿದರು.

ನವೆಂಬರ್ ತಿಂಗಳನ್ನು ಮಕ್ಕಳ ಹಕ್ಕುಗಳ ಮಾಸವೆಂದು ಪರಿಗಣಿಸಿ, ಈ ತಿಂಗಳುದ್ದಕ್ಕೂ ಒಂದಲ್ಲ ಒಂದು ಮಕ್ಕಳ ಕಾರ್ಯಕ್ರಮ ಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತದೆ. ನ.20ನ್ನು ವಿಶ್ವ ಮಕ್ಕಳ ಹಕ್ಕುಗಳ ದಿನವನ್ನಾಗಿ 1990ರಿಂದ ಆಚರಿಸಲಾಗು ತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

ನವೆಂಬರ್ ತಿಂಗಳನ್ನು ಮಕ್ಕಳ ಹಕ್ಕುಗಳ ಮಾಸವೆಂದು ಪರಿಗಣಿಸಿ, ಈ ತಿಂಗಳುದ್ದಕ್ಕೂ ಒಂದಲ್ಲ ಒಂದು ಮಕ್ಕಳ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತದೆ. ನ.20ನ್ನು ವಿಶ್ವ ಮಕ್ಕಳ ಹಕ್ಕುಗಳ ದಿನವನ್ನಾಗಿ 1990ರಿಂದ ಆಚರಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಹಾಗೂ ಚೈಲ್ಡ್‌ಲೈನ್ ಸೇ ದೋಸ್ತಿ ಸಪ್ತಾಹದ ಉದ್ಘಾಟನೆ ನ.14ರ ಬೆಳಗ್ಗೆ 10:00ಗಂಟೆಗೆ ವಳಕಾಡಿನಲ್ಲಿರುವ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆಯಲಿದೆ. ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಎಸ್ಪಿ ನಿಶಾ ಜೇಮ್ಸ್, ಎಡಿಸಿ ಸದಾಶಿವ ಪ್ರಭು, ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಪಾಲ್ಗೊಳ್ಳಲಿದ್ದಾರೆ

 ಬಳಿಕ ಪ್ರತಿದಿನ ಒಂದೊಂದು ವಿಷಯದ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ನ.15ರಂದು ಬಿಕ್ಷಾಟನೆಯಲ್ಲಿ ತೊಡಗಿರುವ ಹಾಗೂ ಬಾಲಕಾರ್ಮಿಕತೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವಿರುತ್ತದೆ. 16ರಂದು ಮಾದಕದ್ರವ್ಯ ವ್ಯಸನ, ಅಂತರ್ಜಾಲ ಸುರಕ್ಷತೆ, ಬಾಲಕಾರ್ಮಿಕತೆ, ಮಕ್ಕಳ ಬಿಕ್ಷಾಟನೆ ಕುರಿತು ವಿವಿಧ ಕಾರ್ಯಕ್ರಮಗಳಿರುತ್ತದೆ. 17ರಂದು ಬಾಲ್ಯವಿವಾಹದ ಕುರಿತು ಜನಜಾಗೃತಿ, 18ರಂದು ವಿಶೇಷ ಅಗತ್ಯವಿರುವ ಮಕ್ಕಳೊಂದಿಗೆ ಕಾರ್ಯಕ್ರಮ, 19ರಂದು ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ, 20ರಂದು ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ದಿನಾಚರಣೆ ಇರುತ್ತದೆ.

ನ.20ರಂದು ಸಂಜೆ 6:30ಕ್ಕೆ ಸಮಾರೋಪ ಸಮಾರಂಭ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದಲ್ಲಿ ನಡೆಯಲಿದೆ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಎಂ.ಜೋಷಿ, ಜಿ.ಜಗದೀಶ್, ಪ್ರೀತಿ ಗೆಹ್ಲೋಟ್, ನಿಶಾ ಜೇಮ್ಸ್, ಕಾವೇರಿ ಮುಖ್ಯ ಅತಿಥಿಯಾಗಿರುವರು.

6ತಿಂಗಳಲ್ಲಿ 164 ಪ್ರಕರಣ: ಉಡುಪಿಯಲ್ಲಿ ಮಕ್ಕಳ ಸಹಾಯವಾಣಿ ಈ ವರ್ಷದ ಮಾರ್ಚ್ ತಿಂಗಳಲ್ಲಿ ಶ್ರೀಕೃಷ್ಣ ಸೇವಾಧಾಮ ಟ್ರಸ್ಟ್‌ನ ಶ್ರೀಕೃಷ್ಣ ಬಾಲನಿಕೇತನದ ಸಹಭಾಗಿತ್ವದಲ್ಲಿ ಪ್ರಾರಂಭಗೊಂಡಿದೆ.ಕಳೆದ 6 ತಿಂಗಳಲ್ಲಿ ಮಕ್ಕಳ ಸಹಾಯವಾಣಿಯಲ್ಲಿ 164 ಪ್ರಕರಣಗಳು ದಾಖಲಾಗಿದ್ದು, ಈವರೆಗೆ 148 ಪ್ರಕರಣಗಳನ್ನು ಪರಿಹರಿಸಲಾಗಿದೆ. 14 ಪ್ರಕರಣಗಳು ಅನುಸರಣೆ ಯಲ್ಲಿದ್ದು, ಪೊಲೀಸ್, ಸರಕಾರದ ವಿವಿಧ ಇಲಾಖೆ ಮತ್ತು ಸಂಬಂಧಿತರ ಸಹಕಾರದಿಂದ ಮಕ್ಕಳಿಗೆ ನ್ಯಾಯ ಒದಗಿಸಲು ಶ್ರಮಿಸಲಾಗುತ್ತಿದೆ ಎಂದು ಉಡುಪಿ ಮಕ್ಕಳ ಸಹಾಯವಾಣಿಯ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ತಿಳಿಸಿದರು.

ಚೈಲ್ಡ್‌ಲೈನ್ ಸೇ ದೋಸ್ತಿ ಅಭಿಯಾನದ ಮುಖ್ಯ ಉದ್ಧೇಶ ಜನರಲ್ಲಿ ಮಕ್ಕಳ ಸಹಾಯವಾಣಿ ಬಗ್ಗೆ ಅರಿವು ಮೂಡಿಸುವುದಾಗಿದ್ದು, ಸಮಸ್ಯೆಯಿಂದ ಬಳಲುತ್ತಿ ರುವ ಮಕ್ಕಳ ರಕ್ಷಣೆಯಲ್ಲಿ ಸಾರ್ವಜನಿಕರೂ ಸ್ವಯಂಪ್ರೇರಣೆಯಿಂದ ಸ್ಪಂದಿಸುವಂತಾಗಬೇಕು. ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಕಂಡು ಬಂದಲ್ಲಿ ಕೂಡಲೇ ಸಹಾಯವಾಣಿ 1098ನ್ನು ಸಂಪರ್ಕಿಸಿ, ಮಾಹಿತಿ ತಿಳಿಸುವಂತೆ ಅವರು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಚೈಲ್ಡ್‌ಲೈನ್ ಸೇ ದೋಸ್ತಿ ಸಪ್ತಾಹದ ಕುರಿತ ಭಿತ್ತಿಪತ್ರವನ್ನು ಬಿಡುಗಡೆ ಗೊಳಿಸಲಾಯಿತು.
ಎಎಸ್‌ಪಿ ಕುಮಾರ್‌ಚಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News