ನ.15ರಂದು 'ಬೆಯಿಲ್ ಕೋಲು' ಪ್ರದರ್ಶನ

Update: 2019-11-13 16:31 GMT

ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಎರಡನೇ ತರಗತಿ ವಿದ್ಯಾರ್ಥಿನಿ ಸಿಮ್ರಿನ್ ಸಾನಿಯಾ ಅಭಿನಯದ `ಬೆಯಿಲ್ ಕೋಲು' ಹೆಸರಿನ ಬ್ಯಾರಿ ಭಾಷೆಯ ಚಲನಚಿತ್ರ ಕಲ್ಕತ್ತಾ ಇಂಟರ್‍ನ್ಯಾಷನಲ್ ಫಿಲಂ ಫೆಸ್ಟಿವಲ್‍ನಲ್ಲಿ ನ.15 ರಂದು ಪ್ರದರ್ಶನ ಕಾಣಲಿದೆ.

ಕಲ್ಕತ್ತಾ ಫಿಲಂ ಫೆಸ್ಟಿವಲ್‍ಗೆ ಆಯ್ಕೆ ಆಗಿರುವ ಮೊದಲ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರಕ್ಕೆ ಉಪ್ಪಿನಂಗಡಿ ಯವರೇ ಆದ ರಾಜ್ಯಪ್ರಶಸ್ತಿ ಪುರಸ್ಕೃತ ನಟ ಎಂ.ಕೆ.ಮಠ ಅವರು ಸಂಭಾಷಣೆ ಬರೆದಿದ್ದು, ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಸಂತನು ಗಂಗೂಲಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಮಂಜು ಪಾಂಡವಪುರ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣದಲ್ಲಿ, ನಿತೀಶ್‍ಕುಮಾರ್ ಸಂಕಲನ ಮಾಡಿರುವ ಈ ಚಲನ ಚಿತ್ರದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ರಂಗಭೂಮಿಯ ಕಲಾವಿದರಾದ ಚಂದ್ರಹಾಸ ಉಳ್ಳಾಲ್, ರೂಪಶ್ರೀ ವರ್ಕಾಡಿ, ಪತ್ರಕರ್ತ ಆಝಾದ್ ಖಂಡಿಗ, ಮಾಸ್ಟರ್ ಧನುಶ್ ಮಣಿಪಾಲ, ಭವ್ಯ ಕೆ., ಸಂದೀಪ್ ಕುಮಾರ್ ಉಡುಪಿ, ಭಾಸ್ಕರ್ ಮಣಿಪಾಲ್ ಮತ್ತಿತರರು ಅಭಿನಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News