×
Ad

ಫೆಲೆಸ್ತೀನ್-ಇಸ್ರೇಲ್ ಸಂಘರ್ಷ: 10 ಫೆಲೆಸ್ತೀನಿಯರು ಮೃತ್ಯು

Update: 2019-11-13 23:34 IST

ಗಾಝಾ/ಜೆರುಸಲೇಮ್, ನ. 13: ಗಾಝಾ ಪಟ್ಟಿಯ ಮೇಲೆ ಮಂಗಳವಾರ ನಡೆಸಿದ ದಾಳಿಯಲ್ಲಿ ಇಸ್ರೇಲ್, ಫೆಲೆಸ್ತೀನ್ ಬಂಡುಕೋರ ಗುಂಪೊಂದರ ಉನ್ನತ ನಾಯಕನನ್ನು ಕೊಂದಿದೆ. ಇದರ ಬೆನ್ನಿಗೇ, ಗಾಝಾ ಕಡೆಯಿಂದ ಇಸ್ರೇಲ್‌ನತ್ತ ಸರಣಿ ರಾಕೆಟ್‌ಗಳು ಹಾರಿದವು.

ಬಹಾ ಅಬು ಅಲ್-ಅಟ್ಟ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟಿರುವ ಬಂಡುಕೋರ ನಾಯಕ.

ಗಾಝಾದಿಂದ ನಡೆಯುತ್ತಿರುವ ರಾಕೆಟ್ ದಾಳಿ ಮತ್ತು ಇಸ್ರೇಲ್‌ನ ವಾಯು ದಾಳಿ ಮಂಗಳವಾರ ರಾತ್ರಿಯವರೆಗೂ ಮುಂದುವರಿದಿದೆ. ದಾಳಿಯಲ್ಲಿ ಅಲ್-ಅಟ್ಟ ಮತ್ತು ಅವರ ಪತ್ನಿ ಸೇರಿದಂತೆ ಫೆಲೆಸ್ತೀನ್‌ನಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಗಾಝಾ ವೈದ್ಯಕೀಯ ಅಧಿಕಾರಿಗಳು ಹೇಳಿದ್ದಾರೆ.

ಗಾಝಾದಿಂದ ಹಾರಿದ ರಾಕೆಟ್‌ಗಳಿಂದಾಗಿ ಸುಮಾರು 25 ಇಸ್ರೇಲಿಗರು ಗಾಯಗೊಂಡಿದ್ದಾರೆ. ಕೆಲವು ರಾಕೆಟ್‌ಗಳು ಟೆಲ್ ಅವೀವ್‌ವರೆಗೂ ತಲುಪಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News