ಮರ್ಹೂಂ ಹನೀಫ್ ಕೊಪ್ಪ ಸ್ಮರಣಾರ್ಥ ರಕ್ತದಾನ ಶಿಬಿರ

Update: 2019-11-15 10:43 GMT

ಶಿವಮೊಗ್ಗ  :  'ಮರ್ಹೂಂ ಹನೀಫ್ ಕೊಪ್ಪ' ಅವರ ಸ್ಮರಣಾರ್ಥ ಮದನಿ ಯಂಗ್ ಮೆನ್ಸ್ ಕೊಪ್ಪ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ  ಜಂಟಿ ಆಶ್ರಯದಲ್ಲಿ ಪ್ರಶಮನಿ ಆಸ್ಪತ್ರೆ ಕೊಪ್ಪ ಹಾಗೂ ರೋಟರಿ ಬ್ಲಡ್ ಬ್ಯಾಂಕ್  ಶಿವಮೊಗ್ಗ ಇದರ ಸಹಭಾಗಿತ್ವದಲ್ಲಿ "ನಾವು ರಕ್ತ ಸಂಬಂಧಿಗಳಾಗೋಣ“‌ಎಂಬ ಶೀರ್ಷಿಕೆ ಅಡಿಯಲ್ಲಿ ರಕ್ತದಾನ ಶಿಬಿರವು ಕೊಪ್ಪದ ಮುಹಿಯುದ್ದೀನ್ ಶಾಫಿ ಜುಮಾ ಮಸೀದಿ ಆವರಣದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ಮದನಿ ಯಂಗ್ ಮೆನ್ಸ್  ಅಧ್ಯಕ್ಷ ರಹೀಮ್ ಕೊಪ್ಪ ಅಧ್ಯಕ್ಷತೆಯಲ್ಲಿ ಮುಹಿಯುದ್ದೀನ್ ಶಾಫಿ ಜುಮಾ ಮಸೀದಿಯ ಉಸ್ತಾದ್  ರಫೀಕ್ ಸಹದಿ ಉದ್ಘಾಟನೆಗೈದರು. ನಂತರ ಮಾತನಾಡಿದ ಅವರು "ಭೂಮಿಯಲ್ಲಿರುವ ಸರ್ವ ಜೀವಿಗಳೊಂದಿಗೆ ಕರುಣೆ ತೋರಿರಿ. ಆಕಾಶದಲ್ಲಿರುವ ಅಲ್ಲಾಹನು ನಿಮ್ಮ ಮೇಲೆ ಕರುಣೆ ತೋರುವನು. ಮರ್ಹೂಂ ಹನೀಫ್  ಮರಣ ಹೊಂದಿದಾಗ ಸೇರಿದ ಜನಸ್ತೋಮವೇ ಸಾಕ್ಷಿಯಾಗಿತ್ತು ಅವರ ಜೀವಿತ ಕಾಲದಲ್ಲಿ ಅವರು ಮಾಡಿದ ಸಮಾಜ ಸೇವೆ" ಎಂದು ಹೇಳಿ ರಕ್ತದಾನ ಮಾಡುವುದರ ಮಹತ್ವವನ್ನು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಶರೀಫ್ ಮುಸ್ಲಿಯಾರ್ (ಅಧ್ಯಾಪಕರು, ಮುಹಿಯುದ್ದೀನ್ ಶಾಫಿ ಜುಮಾ ಮಸೀದಿ ಕೊಪ್ಪ), ವಸೀಮ್ ಪಾಷ (ಸರ್ಕಲ್ ಇನ್ಸ್ಪೆಕ್ಟರ್ ಕೊಪ್ಪ ಪೊಲೀಸ್ ಠಾಣೆ), ಡಾ. ಉದಯ್ ಶಂಕರ್ (ನಿರ್ದೇಶಕರು, ಪ್ರಶಮನಿ ಆಸ್ಪತ್ರೆ ಕೊಪ್ಪ), ಎಸ್ ಎಚ್ ಮಯ್ಯದ್ದಿ (ಅಧ್ಯಕ್ಷರು, ಮುಹಿಯುದ್ದೀನ್ ಶಾಫಿ ಜುಮಾ ಮಸೀದಿ  ಕೊಪ್ಪ),  ಅಬ್ದುಲ್ ಖಾದರ್ (ಮಾಜಿ ಅಧ್ಯಕ್ಷರು, ಅಲ್ಪಸಂಖ್ಯಾತರ ಘಟಕ ಹಾಗೂ ಮಾಜಿ ಅಧ್ಯಕ್ಷರು, ಮುಹಿಯುದ್ದೀನ್ ಶಾಫಿ ಜುಮಾ ಮಸೀದಿ ಕೊಪ್ಪ), ಸಿರಾಜುದ್ದೀನ್ ಪರ್ಲಡ್ಕ (ವ್ಯವಸ್ಥಾಪಕರು, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ), ಸತೀಶ್ (ರೋಟರಿ ಬ್ಲಡ್ ಬ್ಯಾಂಕ್ ಶಿವಮೊಗ್ಗ), ಜುಬೇರ್ ಅಹ್ಮದ್, ಚಿಂತಕರು, ಕಾರ್ಯದರ್ಶಿ ಮೂಹಿಯುದ್ದೀನ್ ಶಾಫಿ ಜುಮ್ಮಾ ಮಸ್ಜಿದ್ ಕೊಪ್ಪ), ಕೆ, ಅಬ್ಬು (ಅಧ್ಯಕ್ಷರು, ಕುವೆಂಪು ಯುವಕರ ಸಂಘ ಕೊಪ್ಪ), ಮಾಲತಿ (ಮಾಜಿ ಅಧ್ಯಕ್ಷರು, ಪಟ್ಟಣ ಪಂಚಾಯತ್ ಕೊಪ್ಪ), ರಶೀದ್ (ಸದಸ್ಯರು ಪಟ್ಟಣ ಪಂಚಾಯತ್ ಕೊಪ್ಪ), ಸುಬ್ರಹ್ಮಣ್ಯ ಶೆಟ್ಟಿ (ಸದಸ್ಯರು, ಪಟ್ಟಣ ಪಂಚಾಯತ್ ಸದಸ್ಯರು ಕೊಪ್ಪ) ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯ ನಿರ್ವಾಹಕರು ಉಪಸ್ಥಿತರಿದ್ದರು.

ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 126 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ರೋಟರಿ ಬ್ಲಡ್ ಬ್ಯಾಂಕ್  ಶಿವಮೊಗ್ಗ ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.
ಎಎಲ್ಎನ್ ರಾವ್ ಮೆಡಿಕಲ್ ಕಾಲೇಜು ಕೊಪ್ಪ ಇದರ ವಿದ್ಯಾರ್ಥಿ, ವಿದ್ಯಾರ್ಥಿನಿಯರು  ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ ಶಿಬಿರದ ಯಶಸ್ವಿಗೆ ಸಹಕರಿಸಿದರು.

ಅಶ್ರಫ್ ಅರಬಿ ಕಲ್ಲಡ್ಕ ಸ್ವಾಗತಿಸಿ,ಕಾರ್ಯಕ್ರಮವನ್ನು ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News