ಉಪ್ಪಿನಂಗಡಿ: ರುಕ್ಮಯ ನಾಯ್ಕ್ ಗೆ ಎಸ್‍ಐ ಯಾಗಿ ಭಡ್ತಿ

Update: 2019-11-15 11:32 GMT

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರುಕ್ಮಯ ನಾಯ್ಕ್ ಸಬ್ ಇನ್ಸ್‍ಪೆಕ್ಟರ್ ಆಗಿ ಭಡ್ತಿ ಹೊಂದಿದ್ದು, ಕಡಬ ಪೊಲೀಸ್ ಠಾಣೆಗೆ ವರ್ಗಾವಣೆ ಆದೇಶವಾಗಿದೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ. ಆಗಿದ್ದ ಇವರು 2018 ಎಪ್ರಿಲ್‍ನಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ವರ್ಗಾವಣೆ ಹೊಂದಿ ಆಗಮಿಸಿದ್ದ ಇವರು ಇದೀಗ ಎಸ್.ಐ. ಆಗಿ ಭಡ್ತಿ ಹೊಂದಿರುತ್ತಾರೆ.

 ಮೂಲತಃ ಬಿಳಿಯೂರು ಅಡ್ಡಹಿತ್ಲು ನಿವಾಸಿ ಆಗಿದ್ದು, ಇದೀಗ ಕೋಡಿಂಬಾಡಿಯಲ್ಲಿ ನೆಲೆಸಿರುವ ರುಕ್ಮಯ ನಾಯ್ಕ್ ರವರು 1992ರಲ್ಲಿ ಮಂಗಳೂರು ಪೂರ್ವ ಸಂಚಾರಿ ಠಾಣೆಯಲ್ಲಿ ಕಾನ್ಸ್ ಟೇಬಲ್ ಹುದ್ದೆಗೆ ನೇಮಕ ಹೊಂದಿ ಬಳಿಕ ಅಲ್ಲಿಂದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ 2002ರಲ್ಲಿ ಹೆಡ್ ಕಾನ್ಸ್‍ಟೇಬಲ್ ಆಗಿ ಭಡ್ತಿ ಹೊಂದಿ ಸುರತ್ಕಲ್ ಠಾಣೆಗೆ ವರ್ಗಾವಣೆ ಹೊಂದಿದ್ದರು. ಅಲ್ಲಿಂದ 2011ರಲ್ಲಿ ಪುಂಜಾಲಕಟ್ಟೆಗೆ ವರ್ಗಾವಣೆ ಹೊಂದಿದ್ದರು, 2012ರಲ್ಲಿ ಎ.ಎಸ್.ಐ. ಆಗಿ ಭಡ್ತಿ ಹೊಂದಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಹೊಂದಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News