ಪಿ.ಎ. ಫಾರ್ಮಸಿ ಕಾಲೇಜಿನಲ್ಲಿ ರಾಷ್ಟ್ರೀಯ ಏಕತಾ, ರಾಷ್ಟ್ರೀಯ ಶಿಕ್ಷಣ ದಿನಾಚರಣೆ

Update: 2019-11-15 12:27 GMT

ಮಂಗಳೂರು: ಪಿ.ಎ. ಫಾರ್ಮಸಿ ಕಾಲೇಜಿನಲ್ಲಿ ರಾಷ್ಟ್ರೀಯ ಏಕತಾ ಮತ್ತು ರಾಷ್ಟ್ರೀಯ ಶಿಕ್ಷಣ ದಿನಾಚರಣೆ ನಡೆಯಿತು.

ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವರಾದ ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಜನ್ಮದಿನವನ್ನು "ರಾಷ್ಟ್ರೀಯ ಶಿಕ್ಷಣ ದಿನ"ವನ್ನಾಗಿ ಮತ್ತು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್‍ರವರ ಜನ್ಮದಿನವನ್ನು "ರಾಷ್ಟ್ರೀಯ ಏಕತಾ ದಿವಸ"ವನ್ನಾಗಿ ಆಚರಿಸುವುದರ ಉದ್ದೇಶವನ್ನು ಮತ್ತು ಅವರು ದೇಶಕ್ಕಾಗಿ ಸಲ್ಲಿಸಿದ ಸೇವೆಯನ್ನು ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಡಾ. ಸಲೀಮುಲ್ಲಾ ಖಾನ್ ವಿವರಿಸಿದರು.

"ಅಬುಲ್ ಕಲಾಂ ಆಝಾದ್  ಮಹಾತ್ಮಾ ಗಾಂಧೀಜಿಯವರ ಆತ್ಮೀಯ ಒಡನಾಡಿಯಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡರು. ಹಿಂದೂ ಮುಸ್ಲಿಮರ ಐಕ್ಯತೆಗಾಗಿ ಶ್ರಮಿಸಿದ ಅವರು ದೇಶ ವಿಭಜನೆಯನ್ನು ವಿರೋಧಿಸಿದರು ಹಾಗೂ ಭಾರತದ ಶಿಕ್ಷಣಕ್ಕೆ ಭದ್ರ ತಳಹದಿಯನ್ನು ರೂಪಿಸಿದರು" ಎಂದರು.

ಸರ್ದಾರ್ ವಲ್ಲಭಬಾಯ್ ಪಟೇಲ್  ರಾಷ್ಟದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆಗಾಗಿ ಶ್ರಮಿಸಿದಂತಹ ಮಹಾನ್ ವ್ಯಕ್ತಿ ಎಂದು ಅವರು ಹೇಳಿದರು. ರಾಷ್ಟೀಯ ಏಕತಾ ದಿವಸದ ನಿಮಿತ್ತ ಪ್ರತಿಜ್ಞಾವಿಧಿಯನ್ನು ಬೋದಿಸಲಾಯಿತು. ದೇಶದ ಶಾಂತಿ ಸೌಹಾರ್ದತೆ ಹಾಗೂ ಆಂತರಿಕ ಭದ್ರತೆಯನ್ನು ಕಾಪಾಡಿಕೊಳ್ಳಲು ನಮ್ಮದೇ ಆದ ಕೊಡುಗೆಗಳನ್ನು ನೀಡುತ್ತೇವೆಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿದರು.

ಉಪನ್ಯಾಸಕರಾದ ಡಾ.ಮುಹಮ್ಮದ್ ಮುಬೀನ್, ಡಾ.ಜಗದೀಶ್ ಹಿರೇಮಠ್, ವಿಜೇತ, ನಿಶ್ಮಿತಾ, ಐಶ್ವರ್ಯಾ, ನಸ್ರೀನ ಉಪಸ್ಥಿತರಿದ್ದರು. ರಿಝ್ವಾನ ಸ್ವಾಗತಿಸಿದರು. ಅಂಜು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News