ಜೀವನದ ಮೌಲ್ಯಗಳ ಅರಿಯುವುದು ಅಗತ್ಯ: ಡಾ.ಹಕೀಂ ಅಝ್ಹರಿ

Update: 2019-11-15 13:59 GMT

ಕುಂದಾಪುರ, ನ.15: ವಿದ್ಯಾರ್ಥಿನಿಯರು ಶರೀಅತ್ ವಿದ್ಯೆಯೊಂದಿಗೆ ಜೀವನದ ಮೌಲ್ಯಗಳ ಅರಿತು ಕೊಳ್ಳಬೇಕು. ಮಹಿಳೆಯರ ಖಾಸಗಿತನದ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡುವವರ ವಿರುದ್ಧ ಹೋರಾಟ ನಡೆಸಬೇಕು ಎಂದು ಶಿಕ್ಷಣ ತಜ್ಞ ಹಾಗೂ ಅಂತಾರಾಷ್ಟ್ರೀಯ ವಿದ್ವಾಂಸ ಡಾ.ಹಕೀಂ ಅಝ್ಹರಿ ಕಾಂತಪುರಂ ಹೇಳಿದ್ದಾರೆ.

ಕೋಟೇಶ್ವರ ಇಮಾಂ ಬೂಸೂರಿ ತಝ್ಕಿಯಾ ಗಾರ್ಡನ್ ಅಧೀನದ ಸಖಾಫಿಯ್ಯ ವುಮೆನ್ಸ್ ಅಕಾಡೆಮಿಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭ ವಿದ್ಯಾರ್ಥಿಗಳನ್ನು್ದೇಶಿಸಿ ಅವರು ಮಾತನಾಡುತಿದ್ದರು.

ಐಬಿಟಿ ಗಾರ್ಡನ್ ಚೇರ್ಮನ್ ಅಸ್ಸಯ್ಯಿದ್ ಕೋಟೇಶ್ವರ ತಂಙಳ್, ಉದ್ಯಮಿಗಳಾದ ಹಂಝ ಹಾಜಿ ಮೂಡುಗೋಪಾಡಿ, ಬಿ.ಎಂ.ಮುಹಮ್ಮದ್, ಐಬಿಟಿ ಗಾರ್ಡನ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ನಾಸಿರ್ ಮೂಡು ಗೋಪಾಡಿ, ಅಕಾಡೆಮಿಯ ಪ್ರಾಂಶುಪಾಲ ನೌಫಲ್ ಮದನಿ ನೇಜಾರ್ ಉಪಸ್ಥಿತರಿದ್ದರು. ಅಕಾಡೆಮಿಯ ಮ್ಯಾನೇಜರ್ ಅಮೀರ್ ಖಾನ್ ಅಹ್ಸನಿ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News