ಅಂಬೇಡ್ಕರ್ ನ್ನು ಇತಿಹಾಸದಿಂದ ಮರೆಮಾಚುವ ವ್ಯವಸ್ಥಿತ ಹುನ್ನಾರ: ನಾರಾಯಣ ಮಣೂರು

Update: 2019-11-15 14:23 GMT

ಉಡುಪಿ, ನ.15: ಅಂಬೇಡ್ಕರ್ ಅವರ ಸಂವಿಧಾನಾತ್ಮ್ಮಕ ಅವಕಾಶಗಳನ್ನು ಪಡೆದುಕೊಂಡು ಬಂದ ಇಡೀ ದಲಿತ ಹಾಗೂ ಶೂದ್ರ ಸಮದಾಯ ಜಾಗೃತ ವಾಗಿ ತಮ್ಮ ಧಾರ್ಮಿಕ ಹಿತಾಸಕ್ತಿ ಹಾಗೂ ಅಧಿಕಾರಿಶಾಹಿ ಬುಡಕ್ಕೆ ಅಪಾಯ ಒದಗುವ ಭಯದಿಂದ ಕೆಲವೊಂದು ಶಕ್ತಿಗಳು ಅಂಬೇಡ್ಕರ್‌ರನ್ನೇ ಶಾಲಾ ಪಠ್ಯ ಪುಸ್ತಕದ ಮೂಲಕ ಇತಿಹಾಸದಿಂದ ಮರೆಮಾಚುವ ವ್ಯವಸ್ಥಿತ ಹುನ್ನಾರ ನಡೆಸು ತ್ತಿವೆ ಎಂದು ದಲಿತ ಚಿಂತಕ ನಾರಾಯಣ ಮಣೂರು ಆರೋಪಿಸಿದ್ದಾರೆ.

ಶಿಕ್ಷಣ ಇಲಾಖೆಯಿಂದ ಅಂಬೇಡ್ಕರ್ ಅವಹೇಳನ ಮಾಡಿರುವ ಮುಖ್ಯ ಕಾರ್ಯದರ್ಶಿಯ ವಜಾಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿ ಮತ್ತು ಉಡುಪಿಯ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಶುಕ್ರವಾರ ಹಮ್ಮಿಕೊಳ್ಳಲಾದ ಧರಣಿಯನ್ನುದೆ್ದೀಶಿಸಿ ಅವರು ಮಾತ ನಾಡುತಿದ್ದರು.

2500 ಸಾವಿರ ವರ್ಷಗಳಿಂದ ದೇಶದ ಮೂಲ ಬೌದ್ಧರನ್ನು ಹಾಗೂ ದಲಿತ ರನ್ನು ಮನುಷ್ಯರು ಎಂಬುದಾಗಿ ಪರಿಗಣಿಸದೆ ಪ್ರಾಣಿಗಳಂತೆ ನಡೆಸಿಕೊಂಡ ವ್ಯವಸ್ಥೆಯ ಬಗ್ಗೆ ಅಧ್ಯಯನ ಮಾಡಿರುವ ಅಂಬೇಡ್ಕರ್, ನಮ್ಮ ಸಂವಿಧಾನದಲ್ಲಿ ಅಸ್ಪಶ್ಯರ ಅಮಾನವೀಯ ಪದ್ಧತಿಗೆ ಮಾನವೀಯ ನೆಲೆಗಟ್ಟು ಕೊಟ್ಟರು. ಮನು ವಾದಿಗಳಿಗೆ ಮುಸ್ಲಿಮರು, ಕ್ರಿಶ್ಚಿಯನ್ನರು ವಿರೋಧಿಗಳಲ್ಲ. ಬದಲಾಗಿ ಅವರ ನಿಜವಾದ ಶತ್ರುಗಳು ದಲಿತರು ಎಂಬುದಾಗಿ ಅವರ ಶಿಬಿರ ಹಾಗೂ ಬೈಠಕ್ ಗಳಲ್ಲಿ ಚರ್ಚೆ ಮಾಡಾಗುತ್ತಿದೆ ಎಂದು ಅವರು ತಿಳಿಸಿದರು.

ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರ ಸಂವಿಧಾನ ಬರೆದಿಲ್ಲ. ಈ ದೇಶದ ಮಣ್ಣಿನ ಮಕ್ಕಳು ಎಂಬ ಕಾರಣಕ್ಕೆ ದಲಿತರಿಗೆ ಮಾನವೀಯತೆ ದೃಷ್ಠಿಯಿಂದ ಕೆಲವೊಂದು ಅವಕಾಶಗಳನ್ನು ಸಂವಿಧಾನದಲ್ಲಿ ಕಲ್ಪಿಸಿಕೊಟ್ಟಿದ್ದಾರೆ ಎಂದ ಅವರು, ಭಾರತದ ಸಂವಿಧಾನವು ತಾಯಿತನದ ಪ್ರೀತಿಯನ್ನು ಹೊಂದಿರುವ ಸಂವಿಧಾನ. ಅದನ್ನು ಬರೆದ ಅಂಬೇಡ್ಕರ್ ಆ ತಾಯಿತನ ಪ್ರೀತಿಯಿಂದ ವಂಚಿತರಾದ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದರು.

ಸಂವಿಧಾನದಲ್ಲಿ ಎಸ್‌ಸಿ-ಎಸ್‌ಟಿ ಅವರಿಗೆ ಶೇ.18 ಮತ್ತು ಉಳಿದ ಶೇ.32 ರಷ್ಟು ಮೀಸಲಾತಿಯನ್ನು ಇತರ ಹಿಂದುಳಿದ ವರ್ಗದವರಿಗೆ ನೀಡಲಾಗಿದೆ. ಆದರೆ ಶೇ.3ರಷ್ಟಿರುವ ಮನುವಾದಿಗಳು ಹಿಂದುಳಿದವರ್ಗವರ ಬ್ರೈನ್‌ವಾಶ್ ಮಾಡಿ, ತಮ್ಮ ಆಡಳಿತ ವ್ಯವಸ್ಥೆ ಭದ್ರವಾಗಿಸಿಕೊಳ್ಳಲು ಮತ್ತು ತಮ್ಮ ಧರ್ಮ ಹಾಗೂ ವಿಚಾರಗಳ ಕಾವಲುಗಾರರಾಗಿ ಮಾಡಿಕೊಳ್ಳಲು ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯ ಮತ್ತು ವಿಚಾರಗಳನ್ನು ಹೇರುತ್ತ ಬರುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಲೇಖಕ, ಹೋರಾಟಗಾರ ನಗರಿ ಬಾಬಯ್ಯ ಮಾತನಾಡಿ, ಅಂಬೇಡ್ಕರ್ ಜಾತಿವ್ಯವಸ್ಥೆ ಈ ದೇಶದಲ್ಲಿ ಇರಬಾರದು ಎಂದು ಹೇಳಿದ್ದಾರೆ. ಮನುಷ್ಯರನ್ನು ಮನುಷ್ಯರಂತೆ ನೋಡದ ಈ ಕೆಟ್ಟ ಸಮಾಜದಲ್ಲಿ ನಾವು ಸಾಕಷ್ಟು ಸುಳ್ಳುಗಳನ್ನು ಎದುರಿಸುತ್ತಿದ್ದೇವೆ. ಇದರ ವಿರುದ್ಧ ಅಂಹಿಸಾತ್ಮಕ ಪ್ರಜಾ ಯುದ್ಧ ಮಾಡಬೇಕಾ ಗಿದೆ. ನಮಗೆ ಹಿಂಸೆಯಲ್ಲಿ ನಂಬಿಕೆ ಇಲ್ಲ. ಹಿಂಸೆ ಯಾರು ಮಾಡಿದ್ದಾರೆಂಬುದು ಚರಿತ್ರೆಯಲ್ಲಿ ಗೊತ್ತಿದೆ. ಸುಳ್ಳು ಹಾಗೂ ಕಳ್ಳ ಚರಿತ್ರೆ ೆಚ್ಚು ಕಾಲ ನಿಲ್ಲುವುದಿಲ್ಲ ಎಂದರು.

ಧರಣಿಯಲ್ಲಿ ಹಿರಿಯ ಚಿಂತಕ ಜಿ.ರಾಜಶೇಖರ್, ಧರ್ಮಗುರು ವಂ. ವಿಲಿಯಂ ಮಾರ್ಟಿಸ್, ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿದರು. ಮುಖಂಡರಾದ ಶ್ಯಾಮ್‌ರಾಜ್ ಬಿರ್ತಿ, ಶಂಕರ್‌ದಾಸ್ ಚೇಂಡ್ಕಳ, ಪರಮೇಶ್ವರ ಉಪ್ಪೂರು, ಪ್ರಶಾಂತ್ ತೊಟ್ಟಂ, ಮಂಜುನಾಥ್ ಬಾಳ್ಕುದ್ರು ಮೊದಲಾದವರು ಉಪಸ್ಥಿತರಿದ್ದರು.

ಸಂವಿಧಾನ ಹಿಂದುತ್ವ ಸಿದ್ಧಾಂತದ ವಿರೋಧಿ: ಜಿ.ರಾಜಶೇಖರ್ 

ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಹಿಂದು ರಾಷ್ಟ್ರದ ಪ್ರಸ್ತಾಪವೇ ಇಲ್ಲ. ಅದರ ಬದಲಿಗೆ ನ್ಯಾಯ, ಸ್ವಾತಂತ್ರ, ಸಮಾನತೆ, ಸಹೋದರತೆ ಎಲ್ಲವೂ ಹಿಂದೂತ್ವ ಸಿದ್ಧಾಂತಕ್ಕೆ ಬದ್ಧ ವಿರೋಧಿಯಾದ ವೌಲ್ಯಗಳನ್ನು ಎತ್ತಿ ಹಿಡಿ ಯುತ್ತದೆ. ಆದುದರಿಂದ ಸಂಘಪರಿವಾರ ಹಾಗೂ ಬಿಜೆಪಿ ಮೂಲಭೂತವಾಗಿ ಸಂವಿಧಾನದ ವಿರೋಧಿಯಾಗಿದೆ ಎಂದು ಹಿರಿಯ ಚಿಂತಕ ಜಿ.ರಾಜಶೇಖರ್ ತಿಳಿಸಿದರು.

ಬಿಜೆಪಿ ಮಟ್ಟಿಗೆ ಭಾರತ ಒಂದು ಹಿಂದೂ ರಾಷ್ಟ್ರ. ಆ ಪರಿಕಲ್ಪನೆ ಸಂವಿಧಾನಕ್ಕೆ ದ್ರೋಹ ಬಗೆಯುವಂತದ್ದಾಗಿದೆ. ಆ ಸತ್ಯವನ್ನು ನಾವು ಮನಗಾಣಬೇಕಿದೆ. ಬಿಜೆಪಿ ನಿಜವಾದ ಅರ್ಥದಲ್ಲಿ ಜನವಿರೋಧಿ ಮತ್ತು ಧರ್ಮವಿರೋಧಿ. ಬಿಜೆಪಿ ಪ್ರಕಾರ ಭಾರತ ಮಾತ್ರ ಹಿಂದುಗಳಿಗೆ ಪವಿತ್ರ ಭೂಮಿ. ರಮಣ ಮಹರ್ಷಿ, ನಾರಾಯಣಗುರು, ಮಹಾತ್ಮ ಗಾಂಧಿ, ಅಂಬೇಡ್ಕರ್ ಮಾತ್ರವೇ ಆಧುನಿಕ ಭಾರತದ ನಿಜವಾದ ಸಂತರೇ ಹೊರತು ಸಾರ್ವಕರ್ ಖಂಡಿ ಅಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News