ಹಾಲಿಡೇಸ್ ಆನ್ ಸೇಲ್ : ಇಂಡಿಯಾ ಇಂಟರ್‌ನ್ಯಾಷನಲ್ ಟ್ರಾವೆಲ್ ಎಕ್ಸಿಬಿಷನ್

Update: 2019-11-15 14:50 GMT

ಮಂಗಳೂರು, ನ.15: ವಿವಿಧ ರಾಜ್ಯಗಳು ಹಾಗೂ ಕರ್ನಾಟಕದ ಜಿಲ್ಲಾ ಪ್ರವಾಸೋದ್ಯಮ ನಿಗಮಗಳು, ಹಾಲಿಡೇ ಮೇಕರ್ಸ್, ಟ್ರಾವೆಲ್ ಏಜೆಂಟ್ಸ್, ಹೋಟೆಲ್, ರೆಸಾರ್ಟ್, ಆಯುರ್ವೇದಿಕ್ ಸ್ಪಾ ಹಾಗೂ ಹೆಲ್ತ್ ಸ್ಪೇ, ಹೋಮ್ ಸ್ಟೇ, ಹೌಸ್‌ಬೋಟ್, ಕಾರ್ಯಕ್ರಮ ಸಂಘಟಕರು ನಗರದ ಟಿಎಂಎ ಪೈ ಕನ್ವೆನ್ಶನಲ್ ಹಾಲ್‌ನಲ್ಲಿ ಏರ್ಪಡಿಸಿದ ‘ಹಾಲಿಡೇಸ್ ಆನ್ ಸೇಲ್’ ಇಂಡಿಯಾ ಇಂಟರ್‌ನ್ಯಾಷನಲ್ ಟ್ರಾವೆಲ್ ಎಕ್ಸಿಬಿಷನ್‌ನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಗುಜರಾಜ್ ಟೂರಿಸಂ ಸೇರಿದಂತೆ ಕರ್ನಾಟಕದ ಉಡುಪಿ ಟೂರಿಸ್ಟ್, ಅಪ್ನಾ ಹಾಲಿಡೇಸ್, ಹಾಲಿಡೇ ಮಂತ್ರ, ಫ್ರೀಡಂ ಹಾಲಿಡೇ, ಈಗಲ್ ಐ ರೆಸಾರ್ಟ್, ಬಿರ್ಚ್‌ವುಡ್ ರಿಟ್ರೀಟ್, ಮೋತಿಲಾಲ್ ಒಸ್ವಾಲ್ ಫೈನಾನ್ಸಿಯಲ್ ಸರ್ವಿಸೆಸ್, ವೀಣಾ ವರ್ಲ್ಡ್ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಇಂಡಿಯಾ ಇಂಟರ್‌ ನ್ಯಾಷನಲ್ ಟ್ರಾವೆಲ್ ಎಕ್ಸಿಬಿಷನ್ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದರು.

ಪ್ರದರ್ಶನವು ಮೂರು ದಿನಗಳ ಕಾಲ ನಡೆಯಲಿದ್ದು, ಮಂಗಳೂರಿನ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು. ದೇಶದ ಪ್ರವಾಸಿ ತಾಣಗಳಲ್ಲದೆ, ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಲು ಮುಂದಾಗಿರುವ ಸಂಸ್ಥೆಗಳಿಗೆ ತಾವು ಆಭಾರಿಯಾಗಿದ್ದೇವೆ. ಕರಾವಳಿಯಲ್ಲೂ ಹಲವು ಪ್ರವಾಸೋದ್ಯಮ ತಾಣಗಳಿವೆ. ಹಲವು ತಿಂಡಿ-ತಿನಿಸುಗಳಿಗೆ ಹೆಸರುವಾಸಿಯಾಗಿದೆ ಎಂದರು.

ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಡುಪಿ ಟೂರಿಸಂ ಅಸೋಸಿಯೇಶನ್‌ನ ಅಧ್ಯಕ್ಷ ಹಾಗೂ ಅಪ್ನಾ ಹಾಲಿಡೇಸ್‌ನ ನಾಗರಾಜ ಹೆಬ್ಬಾರ್, ಐಐಟಿಇ ನಿರ್ದೇಶಕ ಹಾಗೂ ಸಂಯೋಜಕ ಅನುರಾಗ್ ಗುಪ್ತಾ, ಉಡುಪಿಯ ಟೂರಿಸಂ ಕನ್ಸಲ್ಟಂಟ್ ಅಮಿತ್, ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯ್ಕಾ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News