ಮಲ್ಲೂರು: ಬೆಸ್ಟ್ ಸ್ಟೂಡೆಂಟ್ ಆವಾರ್ಡ್ ಪ್ರದಾನ

Update: 2019-11-15 14:59 GMT

ಮಂಗಳೂರು, ನ.15: ಮಲ್ಲೂರು ಗ್ರಾಮದ ನಾಗರಿಕರನ್ನು ಒಳಗೊಂಡ ಸ್ಪಾಟ್ ನ್ಯೂಸ್ ವಾಟ್ಸ್‌ಆ್ಯಪ್ ಬಳಗವು ಮೀಲಾದುನ್ನಬಿಯ ಪ್ರಯುಕ್ತ ಸ್ಥಳೀಯ ಐದು ಮದ್ರಸದ ಐವರು ವಿದ್ಯಾರ್ಥಿಗಳಿಗೆ ಬೆಸ್ಟ್ಸ್ಟೂಡೆಂಟ್ ಆವಾರ್ಡ್ ನೀಡಿ ಗೌರವಿಸಿದೆ.

ಕಲಾಯಿಯ ಹಿದಾಯತ್ತುಲ್ ಇಸ್ಲಾಂ ಮದ್ರಸದ ಫಾತಿಮತ್ ಸ್ವಿಯಾನ, ಬದ್ರಿಯಾನಗರ ನೂರುಲ್ ಹುದಾ ಅರಬಿಕ್ ಸ್ಕೂಲ್ನ ವಿದ್ಯಾರ್ಥಿ ಮುಹಮ್ಮದ್ ಮುಸ್ತಫಾ, ಉದ್ದಬೆಟ್ಟು ಹಿದಾಯತ್ತುಸ್ಸಿಬಿಯನ್ ಮದ್ರಸದ ಇಸ್ಮಿಯಾ, ಮಲ್ಲೂರು ದೆಮ್ಮೆಲೆಯ ನೂರುಲ್ ಊಲುಂ ಅರಬಿಕ್ ವಿದ್ಯಾಲಯದ ನೈಫಾ ಹಲೀಮಾ, ಮಲ್ಲೂರಿನ ಅಸಾಸ್ ಸುನ್ನಿ ಮದ್ರಸದ ಮಹಮ್ಮದ್ ಮಾಝೀನ್ ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News