ಇಸ್ರೇಲ್, ಫೆಲೆಸ್ತೀನಿಯರ ನಡುವೆ ಯುದ್ಧವಿರಾಮ: ವಾಯುದಾಳಿಯಲ್ಲಿ 34 ಫೆಲೆಸ್ತೀನಿಯರ ಸಾವು

Update: 2019-11-15 15:32 GMT

ಗಾಝಾ ಸಿಟಿ, ನ. 15: ಇಸ್ರೇಲ್ ಮತ್ತು ಫೆಲೆಸ್ತೀನ್ ಬಂಡುಕೋರರ ನಡುವೆ ಎರಡು ದಿನಗಳ ಕಾಲ ನಡೆದ ಸಂಘರ್ಷದ ಬಳಿಕ, ಗುರುವಾರ ಉಭಯ ಪಕ್ಷಗಳ ನಡುವೆ ಯುದ್ಧವಿರಾಮ ಏರ್ಪಟ್ಟಿದೆ.

ಫೆಲೆಸ್ತೀನ್ ಬಂಡುಕೋರ ನಾಯಕನೊಬ್ಬನನ್ನು ಇಸ್ರೇಲ್ ವಾಯು ಪಡೆಯು ಕೊಂದ ಬಳಿಕ, ಉಭಯ ಪಕ್ಷಗಳ ನಡುವೆ ಹಿಂಸೆ ಸ್ಫೋಟಗೊಂಡಿತ್ತು. ಹಿಂಸಾಚಾರದಲ್ಲಿ 34 ಫೆಲೆಸ್ತೀನಿಯರು ಪ್ರಾಣ ಕಳೆದುಕೊಂಡಿದ್ದಾರೆ.

ಈಜಿಪ್ಟ್ ಮತ್ತು ವಿಶ್ವಸಂಸ್ಥೆಯ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಏರ್ಪಟ್ಟ ಯುದ್ಧವಿರಾಮವು ಗುರುವಾರ ಮುಂಜಾನೆ ಜಾರಿಗೆ ಬಂದಿದೆ ಎಂದು ಫೆಲೆಸ್ತೀನ್ ಬಂಡುಕೋರ ಗುಂಪು ಮತ್ತು ಇಸ್ರೇಲ್ ಸೇನೆ ಖಚಿತಪಡಿಸಿವೆ.

ಬುಧವಾರ ರಾತ್ರಿ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಒಂದೇ ಕುಟುಂಬದ 8 ಮಂದಿ ಮೃತರಾಗಿದ್ದಾರೆ ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News