ದಕ್ಷಿಣ ಏಶ್ಯದಲ್ಲಿ ‘ಧಾರ್ಮಿಕ ಗುಂಪುಗಳಿಂದ’ ಪ್ರಜಾಪ್ರಭುತ್ವಕ್ಕೆ ಬೆದರಿಕೆ: ಅಮೆರಿಕ ಸಂಸತ್ತು ಕಳವಳ

Update: 2019-11-15 15:34 GMT

ವಾಶಿಂಗ್ಟನ್, ನ. 15: ದಕ್ಷಿಣ ಏಶ್ಯದಲ್ಲಿ ಚಟುವಟಿಕೆಯಲ್ಲಿ ತೊಡಗಿರುವ ‘ಧಾರ್ಮಿಕ ಗುಂಪುಗಳು’ ಪ್ರಜಾಪ್ರಭುತ್ವ ಮತ್ತು ಮಾನವಹಕ್ಕುಗಳಿಗೆ ಬೆದರಿಕೆಯೊಡ್ಡಿವೆ ಎಂಬ ಕಳವಳವನ್ನು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ವ್ಯಕ್ತಪಡಿಸಿದೆ.

‘‘ಬಾಂಗ್ಲಾದೇಶದಲ್ಲಿನ ಮಾನವಹಕ್ಕುಗಳು, ಧಾರ್ಮಿಕ ಸ್ವಾತಂತ್ರ ಮತ್ತು ಜಾತ್ಯತೀತ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹಾಗೂ, ಅದೇ ವೇಳೆ, ಧಾರ್ಮಿಕ ತೀವ್ರವಾದ ಮತ್ತು ಉಗ್ರವಾದದ ಬೆಳವಣಿಗೆಯನ್ನು ತಡೆಯಲು ಆ ದೇಶದೊಂದಿಗೆ ಅಮೆರಿಕ ಸರಕಾರವು ಸಕ್ರಿಯವಾಗಿ ಸಂಪರ್ಕದಲ್ಲಿರಬೇಕು’’ ಎಂದು ವಿದೇಶ ವ್ಯವಹಾರಗಳ ಕುರಿತ ಯುಎಸ್ ಹೌಸ್ ಕಮಿಟಿಗೆ ಸಲ್ಲಿಸಿದ ಹೇಳಿಕೆಯೊಂದರಲ್ಲಿ ಕಾಂಗ್ರೆಸ್ಸಿಗ ಜಿಮ್ ಬ್ಯಾಂಕ್ಸ್ ಹೇಳಿದ್ದಾರೆ.

‘‘ಧಾರ್ಮಿಕ ಸ್ವಾತಂತ್ರ ಮತ್ತು ಪ್ರಾದೇಶಿಕ ಸ್ಥಿರತೆಗೆ ಬೆದರಿಕೆಯೊಡ್ಡುತ್ತಿರುವ ಜಮಾತೆ ಇಸ್ಲಾಮಿ ಮತ್ತು ಅದರ ಸಹ ಸಂಘಟನೆಗಳ ಸಾಮರ್ಥ್ಯವನ್ನು ನಾಶಪಡಿಸುವಂತೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳ ಸರಕಾರಗಳಿಗೆ ಹೇಳಿಕೆಯಲ್ಲಿ ಕರೆ ನೀಡಲಾಗಿದೆ.

ಜಮಾತೆ ಇಸ್ಲಾಮಿ ಮತ್ತು ಇತರ ತೀವ್ರವಾಧಿ ಸಂಘಟನೆಗಳೊಂದಿಗೆ ಅಂತರ ಕಾಯ್ದುಕೊಳ್ಳುವಂತೆಯೂ ಬಾಂಗ್ಲಾದೇಶ್ ನ್ಯಾಶನಲಿಸ್ಟ್ ಪಾರ್ಟಿಯನ್ನು ಹೌಸ್ ಒತ್ತಾಯಿಸಿದೆ ಎಂದು ಬ್ಯಾಂಕ್ಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News