ಬಂಟ್ವಾಳ : ನಿಲ್ಲಿಸಿದ್ದ ಬೈಕ್ ಕಳವು; ದೂರು

Update: 2019-11-15 15:41 GMT

ಬಂಟ್ವಾಳ : ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ಎಂಬಲ್ಲಿನ ಗ್ಯಾರೇಜೊಂದರ ಬಳಿಯಲ್ಲಿ ನಿಲ್ಲಿಸಿದ್ದ ಬೈಕೊಂದು ಕಳವಾಗಿರುವ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಕ್ರಿಬೆಟ್ಟು ನಿವಾಸಿ ಹರೀಶ್ ಎಂಬವರ ಯಮಹಾ ಕಂಪೆನಿಯ ಬೈಕ್ ಅನ್ನು ಬಂಟ್ವಾಳ ಜಕ್ರಿಬೆಟ್ಟು ಅಪೂರ್ವ ಗ್ಯಾರೇಜ್ ಸಮೀಪ ನ. 13ರಂದು ರಾತ್ರಿ ವೇಳೆ ನಿಲ್ಲಿಸಿ ಮನೆಗೆ ತೆರಳಿದ್ದು, ಮರುದಿನ ಬೆಳಗ್ಗೆ ನೋಡುವಾಗ ಬೈಕ್ ಕಳವಾಗಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News