ಸಂಬಂಧ ಸುಧಾರಣೆಗೆ ಪಾಕ್‌ನಲ್ಲಿರುವ ಭಾರತೀಯರನ್ನು ಹಸ್ತಾಂತರಿಸಬೇಕು: ಎಸ್. ಜೈಶಂಕರ್

Update: 2019-11-15 15:47 GMT

ಲಂಡನ್, ನ. 15: ಪಾಕಿಸ್ತಾನವು ಭಾರತದ ವಿರುದ್ಧ ಬಹಿರಂಗವಾಗಿಯೇ ಭಯೋತ್ಪಾದನೆ ನಡೆಸುತ್ತಿದ್ದು, ಅದರೊಂದಿಗಿನ ಸಂಬಂಧ ಬಿಕ್ಕಟ್ಟಿನಲ್ಲಿಯೇ ಮುಂದುವರಿದಿದೆ ಎಂದು ಭಾರತದ ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಭಾರತದೊಂದಿಗೆ ಸಹಕರಿಸುವ ಗಂಭೀರ ಇಚ್ಛೆಯನ್ನು ಪಾಕಿಸ್ತಾನ ಹೊಂದಿದ್ದರೆ, ಭಯೋತ್ಪಾದನೆ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ ಹಾಗೂ ಈಗ ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಭಾರತೀಯರನ್ನು ಅದು ಹಸ್ತಾಂತರಿಸಬೇಕು ಎಂದು ಫ್ರೆಂಚ್ ಪತ್ರಿಕೆ ‘ಲೆ ಮೊಂಡ್’ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

‘‘ಹಲವು ವರ್ಷಗಳಿಂದ ಉಭಯ ದೇಶಗಳ ನಡುವಿನ ಸಂಬಂಧ ಬಿಕ್ಕಟ್ಟಿನಲ್ಲಿದೆ. ಮುಖ್ಯವಾಗಿ, ಪಾಕಿಸ್ತಾನವು ಭಯೋತ್ಪಾದನೆ ಉದ್ಯಮವನ್ನು ಆರಂಭಿಸಿದ್ದು, ಭಾರತದಲ್ಲಿ ದಾಳಿ ನಡೆಸಲು ಭಯೋತ್ಪಾದಕರನ್ನು ಕಳುಹಿಸುತ್ತಿದೆ. ಸ್ವತಃ ಪಾಕಿಸ್ತಾನವೇ ಇದನ್ನು ನಿರಾಕರಿಸುತ್ತಿಲ್ಲ’’ ಎಂದರು.

ಭಾರತದೊಂದಿಗಿನ ಸಂಬಂಧ ‘‘ಶೂನ್ಯಕ್ಕೆ ಸಮೀಪವಾಗಿದೆ’’ ಎಂಬುದಾಗಿ ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಕುರೇಶಿ ಇತ್ತೀಚೆಗೆ ನೀಡಿರುವ ಹೇಳಿಕೆಯ ಕುರಿತ ಪ್ರಶ್ನೆಯೊಂದಕ್ಕೆ ಜೈಶಂಕರ್ ಉತ್ತರಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News