ಮಂಗಳೂರು: ಉದ್ಯಮಿ ನಾಪತ್ತೆ

Update: 2019-11-15 16:02 GMT

ಮಂಗಳೂರು, ನ.15: ಟ್ರಾನ್ಸ್‌ಪೋರ್ಟ್ ವ್ಯವಹಾರ ನಡೆಸುತ್ತಿದ್ದ ಉದ್ಯಮಿ ನಾಪತ್ತೆಯಾದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಡ್ಯಾರ್ ನಿವಾಸಿ ಅರುಣ್ ರೋನಾಲ್ಡ್ ಡಿಸೋಜ (36) ನಾಪತ್ತೆಯಾದ ಉದ್ಯಮಿ.

ಅರುಣ್ ಸ್ವಂತ ಟ್ರಾನ್ಸ್‌ಪೋರ್ಟ್ ವ್ಯವಹಾರ ನಡೆಸುತ್ತಿದ್ದರು. ನ.13ರಂದು ಬೆಳಗ್ಗೆ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ 2:30ಕ್ಕೆ ಕರೆ ಮಾಡಿದಾಗ ತಾನು ಬ್ಯುಸಿಯಾಗಿರುವುದಾಗಿ ಹೇಳಿ ಫೋನ್ ಕರೆ ಕಟ್ ಮಾಡಿದ್ದರು. ಆನಂತರ ಸಂಜೆ 7:30ಕ್ಕೆ ಪುನಃ ಕರೆ ಮಾಡಿದಾಗ ಫೋನ್ ಸ್ವಿಚ್‌ಆಫ್ ಆಗಿದೆ. ಅರುಣ್ ಸಾಮಾನ್ಯವಾಗಿ ರಾತ್ರಿ 11 ಗಂಟೆಯೊಳಗೆ ಮನೆಗೆ ಬರುತ್ತಿದ್ದರು. ಇಲ್ಲಿಯವರೆಗೆ ಮನೆಗೆ ವಾಪಸಾಗಿಲ್ಲ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ಚಹರೆ: 5.8 ಅಡಿ ಎತ್ತರ, ಕೋಲುಮುಖ, ಎಣ್ಣೆ ಕಪ್ಪು ಮೈಬಣ್ಣ, ಬಲಗೈ ಹೆಬ್ಬೆರಳ ಕೆಳಭಾಗದಲ್ಲಿ ಶಿಲುಬೆಯ ಹಚ್ಚೆ ಗುರುತಿದೆ. ಕನ್ನಡ, ತುಳು, ಕೊಂಕಣಿ, ಹಿಂದಿ ಮಾತನಾಡುತ್ತಾರೆ. ನಾಪತ್ತೆಯಾಗಿರುವ ಉದ್ಯಮಿ ಬಗ್ಗೆ ಮಾಹಿತಿ ಇದ್ದಲ್ಲಿ ಮಂಗಳೂರು ಗ್ರಾಮಾಂತರ ಠಾಣೆ (0824- 2220535) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News