ಶಿಕ್ಷಕರಿಗಿಂತ ಮಕ್ಕಳ ಗ್ರಹಿಕೆ 10 ಪಟ್ಟು ಅಧಿಕ: ಡಾ.ಶ್ರೀಪಾದ್ ಭಟ್

Update: 2019-11-15 16:50 GMT

ಉಡುಪಿ, ನ. 15: ಇಂದು ನೈತಿಕ ಶಿಕ್ಷಣಕ್ಕಿಂತ ಮಾರುಕಟ್ಟೆ ಹೇಳುವ ಜ್ಞಾನಕ್ಕೆ ತಕ್ಕಂತೆ ನಮ್ಮ ಮಕ್ಕಳನ್ನು ತರಬೇತು ಗೊಳಿಸುತ್ತಿದ್ದೇವೆ. ಗ್ರಹಿಕೆ ಎಂಬುದು ಶಿಕ್ಷಕರಿ ಗಿಂತ 10ಪಟ್ಟು ಹೆಚ್ಚು ಮಕ್ಕಳಲ್ಲಿ ಇರುತ್ತದೆ. ಮಕ್ಕಳಿಗೆ ಅನುಭವದ ಕೊರತೆ ಇದೆಯೇ ಹೊರತು ಗ್ರಹಿಕೆಯ ಕೊರತೆ ಇರುವುದಿಲ್ಲ ಎಂದು ರಂಗತಜ್ಞ ಡಾ. ಶ್ರೀಪಾದ್ ಭಟ್ ಹೇಳಿದ್ದಾರೆ.

ಅನುಗ್ರಹ ಪ್ರಕಾಶನದ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶುಕ್ರವಾರ ಆಯೋಜಿಸ ಲಾದ ಸುರಭಿ ಕೊಡವೂರು ಬರೆದ ‘ಮೊಬೈಲ್ ಮೈಥಿಲಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಮಕ್ಕಳ ಸಾಹಿತ್ಯದಲ್ಲಿ ಶೇ.25ರಷ್ಟು ಮಾತ್ರ ಮಕ್ಕಳಿಗೆ ಬೇಕಾದ ಜಗತ್ತನ್ನು ಕಲ್ಪಿಸಿ ಕೊಡಲಾಗಿದೆ. ಉಳಿದ ಶೇ.75ರಷ್ಟು ಮಕ್ಕಳ ಸಾಹಿತ್ಯದಲ್ಲಿ ನೀತಿ ಬೋಧನೆ ಹೆಸರಿನಲ್ಲಿ ದೊಡ್ಡವರ ಜಗತ್ತನ್ನು ಹೇರಲಾಗಿದೆ. ಮೂರು ವರ್ಷದ ನಂತರ ಮಕ್ಕಳನ್ನು ಶಿಕ್ಷಣ ಸಂಸ್ಥೆಗೆ ಒಪ್ಪಿಸಲಾಗುತ್ತದೆ. ಅದರ ನಂತರ ಆ ಮಗು ತನ್ನ ಬಾಲ್ಯವನ್ನು ಕಳೆದುಕೊಂಡು ದುಡಿಯುವ ಯಂತ್ರ ವಾಗಿ ಹೊರಗೆ ಬರುತ್ತದೆ ಎಂದರು.

ನೃತ್ಯದ ಮೂಲಕ ಮಕ್ಕಳಿಂದಲೇ ಮಕ್ಕಳ ಕತೆಗಳ ಈ ಪುಸ್ತಕವನ್ನು ವಿನೂತನ ರೀತಿಯಲ್ಲಿ ಬಿಡುಗಡೆಗೊಳಿಸಲಾಯಿತು. ಲೇಖಕಿ ಸುಧಾ ಅಡುಕಳ ಮಾತನಾ ಡಿದರು. ಸುರಭಿ ಕೊಡವೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News