ಗಾಂಜಾ ಸೇವನೆ: ನಾಲ್ವರು ವಶಕ್ಕೆ
Update: 2019-11-15 22:24 IST
ಉಡುಪಿ, ನ.15: ಗಾಂಜಾ ಸೇವನೆಗೆ ಸಂಬಂಧಿಸಿ ನಾಲ್ಕು ಮಂದಿಯನ್ನು ಉಡುಪಿ ಸೆನ್ ಪೊಲೀಸರು ನ.11ರಂದು ಮಣಿಪಾಲದಲ್ಲಿ ವಶಕ್ಕೆ ಪಡೆದು ಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಣಿಪಾಲ ಲಯನ್ಸ್ ಭವನದ ಬಳಿ ತಮಿಳುನಾಡು ಚೆನ್ನೈಯ ಜೂಡ್ ಅಶ್ವತ್ ಎಫ್.(20), ಮಣಿಪಾಲ ಕೆಎಫ್‌ಸಿ ಬಳಿ ಬೈಂದೂರು ನಾಗೂರಿನ ಮುಹಮ್ಮದ್ ಅರ್ಸನಾನ್ ಎಂ.ಜೆ.(21), ಮಣಿಪಾಲದ ಈಶ್ವರ ನಗರ ಎಂಬಲ್ಲಿ ಉಡುಪಿ ಸಂತೆಕಟ್ಟೆಯ ಡಿಯಾನ್ ವಾರಿಯಾನ್ ಮಾರ್ಟಿಸ್(21) ಮತ್ತು ಕೇರಳ ಕಣ್ಣೂರಿನ ಜೀತಿನ್(22) ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಕೆಎಂಸಿಯ ಫಾರೆನ್ಸಿಕ್ ವಿಭಾಗದ ಮುಂದೆ ಹಾಜರುಪಡಿಸಿ ಪರೀಕ್ಷಿಸಲಾಗಿದ್ದು, ಈ ವರದಿಯಲ್ಲಿ ಇವರೆಲ್ಲರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.