ಮಟ್ಕಾ: ಐವರ ಬಂಧನ

Update: 2019-11-15 16:59 GMT

ಗಂಗೊಳ್ಳಿ, ನ.15: ವಿವಿಧ ಕಡೆಗಳಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ನಾಲ್ವರನ್ನು ಗಂಗೊಳ್ಳಿ ಪೊಲೀಸರು ನ.14ರಂದು ಸಂಜೆ ವೇಳೆ ಬಂಧಿಸಿದ್ದಾರೆ.

ಗಂಗೊಳ್ಳಿ ನೀರಿನ ಟ್ಯಾಂಕ್ ಸಮೀಪ ಗಂಗೊಳ್ಳಿ ಗುಂದುಹಿತ್ಲುವಿನ ಭಾಸ್ಕರ ಪೂಜಾರಿ(65), ನಾಯಕ್ವಾಡಿ ಮಂಕಿ ರಸ್ತೆಯ ಪದ್ಮನಾಭ ನಾಯ್ಕ್ (69), ಮೇಲ್ಗಂಗೊಳ್ಳಿ ಸುಗ್ಗಿಬೈಲುವಿನ ದಾಮೋದರ ಶೇರುಗಾರ್(51) ಮತ್ತು ಗಂಗೊಳ್ಳಿ ವೀರೇಶ್ವರ ದೇವಸ್ಥಾನದ ಸಮೀಪ ಗಂಗೊಳ್ಳಿ ಚರ್ಚ್‌ರೋಡ್ ನಿವಾಸಿ ರಾಮಚಂದ್ರ (49) ಎಂಬವರನ್ನು ಬಂಧಿಸಿ ಒಟ್ಟು 8070 ರೂ. ನಗದು ವಶ ಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು: ಕಟಪಾಡಿ ಏಣಗುಡ್ಡೆ ಗ್ರಾಮದ ಪಂಚಮಿ ಸ್ಟೋರ್ ಹತ್ತಿರ ನ.15 ರಂದು ಅಪರಾಹ್ನ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಅಂಬಾಗಿಲು ಅರ್ಕದ ಕಟ್ಟೆಯ ವಿಜಯ(28) ಎಂಬಾತನನ್ನು ಕಾಪು ಪೊಲೀಸರು ಬಂಧಿಸಿ ಒಂದು ಮೊಬೈಲ್ ಹಾಗೂ 1040 ರೂ ನಗದು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News