ಸಿಟಿ ನರ್ಸಿಂಗ್ ಕಾಲೇಜಿನಲ್ಲಿ ವಿಶ್ವ ಮಧುಮೇಹ ದಿನಾಚರಣೆ
Update: 2019-11-17 18:06 IST
ಮಂಗಳೂರು, ನ.17: ಸಿಟಿ ಆಸ್ಪತ್ರೆ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಕದ್ರಿ, ಸಿಟಿ ನರ್ಸಿಂಗ್ ಕಾಲೇಜು ಶಕ್ತಿನಗರ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ವಿಶ್ವ ಮಧುಮೇಹ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.
ಸಿಟಿ ಆಸ್ಪತ್ರೆ ಕದ್ರಿ, ಶಕ್ತಿನಗರದ ಹೀರಾ ಇಂಟರ್‌ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, ನಾಲ್ಯ ಪದವು ಕುವೆಂಪು ಶತಮಾನೋತ್ಸವ ಪ್ರಾಥಮಿಕ ಶಾಲೆಯ ಸುಮಾರು 250 ವಿದ್ಯಾರ್ಥಿಗಳು, ಒಳರೋಗಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.
ಸಿಟಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಅಶ್ವಿನ್ ಬ್ರೋಮಿಯೋ ಜೆ., ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಮೆರ್ಲಿನ್ ಶೀಬಾ ಜೆಂತೋ, ಆಡಳಿತಾಧಿಕಾರಿ ಲೋಕಯ್ಯ ಶೆಟ್ಟಿ ಉಪಸ್ಥಿತರಿದ್ದರು.