ಬಡಗಬೆಳ್ಳೂರು : 'ಸೌಹಾರ್ದತೆಗಾಗಿ ಸ್ವಚ್ಛತಾ' ಕಾರ್ಯಕ್ರಮ

Update: 2019-11-17 14:27 GMT

ಬಂಟ್ವಾಳ : ಇಲ್ಲಿನ ಬಡಗಬೆಳ್ಳೂರು ಗ್ರಾಮದ ಬಾಳಿಕೆಯಲ್ಲಿ 'ಸೌಹಾರ್ದತೆಗಾಗಿ ಸ್ವಚ್ಛತಾ' ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಸ್ಜಿದುಲ್ ಇಮಾಂ ಶಿಬ್ಲಿ ಬಾಳಿಕೆ ಮತ್ತು ಯಕ್ಷಗಾನ ಕಲಾ ಮಂಡಳಿ ಬಾಳಿಕೆ, ಬಾಳಿಕೆ ಕುಟುಂಬ ಸಂಘದ ಸಹಯೋಗದೊಂದಿಗೆ ಸೌಹಾರ್ದತೆಗಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷರಾದ ಬಿ.ಎಚ್ ಅಶ್ರಫ್ ಮಾತನಾಡಿ, ಎಲ್ಲಾ ಧರ್ಮದ ಜನರನ್ನು ಒಗ್ಗೂಡಿಸಿ ಸೌಹಾರ್ದತೆಗಾಗಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿದ್ದೇವೆ. ಈ ಮೂಲಕ ಸ್ವಚ್ಛತೆಯ ಜೊತೆ ಸೌಹಾರ್ದತೆಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದರು.

ತಾ.ಪಂ. ಸದಸ್ಯ ದೇವಪ್ಪ ಪೂಜಾರಿ ಮಾತನಾಡಿ, ಪ್ರತಿಯೊಂದು ಹಬ್ಬದ ಸಂದರ್ಭದಲ್ಲೂ ನಾವು ಜಾತಿ ಭೇದ ಮರೆತು ಒಗ್ಗೂಡುತ್ತೇವೆ. ಇಲ್ಲಿ ಎಲ್ಲಾ ಧರ್ಮದ ಜನರು ಸೌಹಾರ್ದತೆಯಿಂದ ಇತರ ಊರಿಗೆ ಮಾದರಿಯಾಗುವಂತೆ, ಒಂದೇ ಕುಟುಂಬದ ರೀತಿ ಬದುಕುತ್ತಿದ್ದೇವೆ, ಇದಕ್ಕೆ ಈ ಸ್ವಚ್ಛತಾ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.

ಈ ಸಂದರ್ಭ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಮಯ್ಯ, ಮಸೀದಿ ಉಪಾಧ್ಯಕ್ಷ ಹಮೀದ್, ಬಾಳಿಕೆ ಕುಟುಂಬ ಪ್ರಧಾನ ಕಾರ್ಯದರ್ಶಿ ರಶೀದ್, ಮೊಹನ್ ಕೊಟ್ಟಾರಿ, ವಾಮದೇವ ಟೈಲರ್, ಅಝೀಝ್, ಇಮಾಂ ಶಿಬ್ಲಿ ಖತೀಬರಾದ ಮುಹಮ್ಮದ್ ಹನೀಫ್ ಹಸನಿ, ಸಿನಾನ್, ಸುರೇಶ್ ಕುಮಾರ್, ಅಝೀಝ್ ಪೆರ್ಮುದೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News