ತಲಪಾಡಿ ಡೈಮಂಡ್ ಸ್ಕೂಲ್‍ನಲ್ಲಿ 'ವಾಟರ್ ಬೆಲ್' ವಿರಾಮ

Update: 2019-11-17 14:05 GMT

ಬಂಟ್ವಾಳ, ನ. 17: ವಿದ್ಯಾರ್ಥಿಗಳು ಕುಡಿಯುವ ನೀರಿನ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿರುವುದನ್ನು ಸರಿದೂಗಿಸುವ ನಿಟ್ಟಿನಲ್ಲಿ ತಲಪಾಡಿ ಡೈಮಂಡ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ 'ವಾಟರ್ ಬೆಲ್' ಮೂಲಕ ಮಕ್ಕಳಲ್ಲಿ ನೀರು ಕುಡಿಯಲು ಪ್ರೇರೇಪಿಸಲು ಪ್ರಯೋಗ ರೂಪಿಸಿದೆ.

ಹಲವು ಪೋಷಕರು ತಮ್ಮ ಮಕ್ಕಳಿಗೆ ಬೆಳಗ್ಗೆ ಬಾಟಲಿಯಲ್ಲಿ ನೀರು ತುಂಬಿಸಿ ಕೊಟ್ಟಿದ್ದರೂ ಅದನ್ನು ಕುಡಿಯದೆ ಇರುವುದು, ವಿದ್ಯಾರ್ಥಿಗಳಲ್ಲಿ ಕಂಡು ಬರುವ ಜ್ವರ, ಹೊಟ್ಟೆನೋವು, ತಲೆನೋವಿನಂತಹ ಬಾಧೆಗಳು ಬರುವ ಸಾಧ್ಯತೆವಿರುವುದರಿಂದ ಈ ವಾಟರ್ ಬೆಲ್ ವಿರಾಮಕ್ಕೆ ಶನಿವಾರ ಚಾಲನೆ ನೀಡಿದೆ. ವಾಟರ್ ಬೆಲ್‍ನೊಂದಿಗೆ ಫ್ರೂಟ್ಸ್ ,ವೆಜಿಟೇಬಲ್ಸ್ ಬೆಲ್ ವಿರಾಮ ಕೂಡಾ ಇದ್ದು, ಶಾಲೆಯ ಈ ವೈಶಿಷ್ಟತೆಗೆ ವಿದ್ಯಾರ್ಥಿಗಳ ಪೋಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಡೈಮಂಡ್ ಇಂಟರ್ ನ್ಯಾಷನಲ್ ಸ್ಕೂಲ್‍ನ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ. ಅಬೂಬಕರ್ ಅವರ ಮಾರ್ಗಸೂಚಿಯೊಂದಿಗೆ ಶಾಲಾ ಮುಖ್ಯ ಶಿಕ್ಷಕಿ ಕವಿತಾ ಹಾಗೂ ಗಿರೀಶ್ ಕಾಮತ್ ಮಕ್ಕಳಿಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News