ಬಂಟ್ವಾಳ : ಮಾಜಿ ತಾ‌.ಪಂ.ಸದಸ್ಯನ ಮನೆಯಲ್ಲಿ ಹಾಡಹಗಲೇ ನಗ-ನಗದು ಕಳವು

Update: 2019-11-17 14:13 GMT

ಬಂಟ್ವಾಳ, ನ. 17: ಮಾಜಿ ತಾ‌.ಪಂ.ಸದಸ್ಯರೋರ್ವರ ಮನೆಯಲ್ಲಿ ಹಾಡಹಗಲೇ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆಳಗಿನ ತುಂಬೆಯಲ್ಲಿ ರವಿವಾರ ನಡೆದಿದೆ.

ಕೆಳಗಿನ ತುಂಬೆ ನಿವಾಸಿ, ಮಾಜಿ ತಾಪಂ ಸದಸ್ಯ ಸೋಮಪ್ಪ ಕೋಟ್ಯಾನ್ ಎಂಬರಿಗೆ ಸೇರಿದ ಮನೆಯಲ್ಲಿ ಈ ಕೃತ್ಯ ನಡೆದಿದೆ. ಮನೆಮಂದಿ ಎಲ್ಲರೂ ಕಾರ್ಯಕ್ರಮಕ್ಕೆಂದು ಅಲ್ಲಿಪಾದೆಗೆ ತೆರಳಿದ್ದು, ಈ ವೇಳೆ ಹಿಂಬದಿಯ ಬಾಗಿಲು ಮುರಿದು ಒಳ ಪ್ರವೇಶಿಸಿದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಮಧ್ಯಾಹ್ನ 11.30 ರಿಂದ 1 ಗಂಟೆಯ ಮಧ್ಯೆ ಕಳವು ಮಾಡಿರಬಹುದು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಕೊಠಡಿಯ ಗೊದ್ರೆಜ್ ನಲ್ಲಿಟ್ಟಿದ್ದ 398 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಹಾಗೂ ನಗದು ಕಳವು ಮಾಡಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. 15 ಸಾವಿರ ರೂ. ನಗದು ಹಾಗೂ ಚಿನ್ನಾಭರಣಗಳ ಒಟ್ಟು ಮೌಲ್ಯ 12.92 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಅಗಮಿಸಿದ್ದಾರೆ.

ಎಸ್ಪಿ ಸೈದುಲು ಅಡಾವತ್ , ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಎಸ್ಸೈ ಪ್ರಸನ್ನ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News