ಕನಕ ಸದ್ಭಾವನ ಜ್ಯೋತಿ ರಥಯಾತ್ರೆಗೆ ಸ್ವಾಗತ

Update: 2019-11-17 14:21 GMT

ಮಂಗಳೂರು, ನ.17: ಜನಜಾಗೃತಿ ಉದ್ದೇಶದಿಂದ ಬೆಂಗಳೂರಿನಿಂದ ಹೊರಟ ಕನಕ ಸದ್ಭಾವನ ಜ್ಯೋತಿ ರಥಯಾತ್ರೆಯನ್ನು ಕರಾವಳಿ ಕುರುಬರ ಸಂಘ ಮಂಗಳೂರು ವತಿಯಿಂದ ರವಿವಾರ ನಗರದ ತುಳುಭವನ ಆವರಣದಲ್ಲಿ ಸ್ವಾಗತಿಸಲಾಯಿತು.

ಯಾತ್ರೆಯ ನೇತೃತ್ವ ವಹಿಸಿರುವ ರಥಯಾತ್ರೆ ಸಮಿತಿ (ಬೆಂಗಳೂರು) ರಾಜ್ಯಾಧ್ಯಕ್ಷ ಓಂ ಕೃಷ್ಣಮೂರ್ತಿ ಮಾತನಾಡಿ ಸಮಾಜದ ಅಭಿವೃದ್ಧಿ, ಮುಖ್ಯವಾಗಿ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕಗಳಲ್ಲಿರುವ ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆಗೊಳಿಸಬೇಕು. ಶಿಕ್ಷಣಕ್ಕೆ ಒತ್ತು ನೀಡುವುದು ರಥಯಾತ್ರೆಯ ಮುಖ್ಯ ಉದ್ದೇಶ ಎಂದು ಹೇಳಿದರು.

ಉಡುಪಿಯಲ್ಲಿ 1.25 ಕೋ.ರೂ. ವೆಚ್ಚದಲ್ಲಿ ಕನಕ ಮಂದಿರ ನಿರ್ಮಿಸಲು ಉದ್ದೇಶಿಸಲಾಗಿದ್ದು, ಪೇಜಾವರ ಶ್ರೀಗಳು ಸಮಿತಿಯ ಮಹಾಪೋಷಕರಾಗಿದ್ದಾರೆ. ಮಾಜಿ ಸಚಿವ ಪ್ರಮೋದ್‌ಮಧ್ವರಾಜ್ ಅಧ್ಯಕ್ಷರಾಗಿ, ನಾನು ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಸುಮಾರು 600 ಚದರ ಅಡಿ ವಿಸ್ತೀರ್ಣದಲ್ಲಿ 26 ಅಡಿ ಎತ್ತರದಲ್ಲಿ ನೂತನ ಮಂದಿರ ನಿರ್ಮಾಣವಾಗಲಿದೆ ಎಂದು ಓಂ ಕೃಷ್ಣಮೂರ್ತಿ ಹೇಳಿದರು.

ಸ್ವಾಗತದ ಬಳಿಕ ನಗರದ ತುಳುಭವನದಲ್ಲಿ ಜರುಗಿದ ಕನಕ ಜಯಂತಿ ಕಾರ್ಯಕ್ರಮವನ್ನು ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಟಿ.ಡಿ. ಶ್ರೀಧರ್ ಉದ್ಘಾಟಿಸಿದರು. ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಉಪನ್ಯಾಸ ನೀಡಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಬಿ.ಎ.ಮೊದಿನ್‌ಬಾವ, ಶ್ರೀ ದೇವಿ ವಿದ್ಯಾಸಂಸ್ಥೆಯ ನಿರ್ದೇಶಕ ಡಾ.ಕೆ.ಇ.ಪ್ರಕಾಶ್,ಸದ್ಭಾವನ ಜ್ಯೋತಿ ರಥಯಾತ್ರೆ ಸಮಿತಿ ಸದಸ್ಯರಾದ ನಾಗಮ್ಮ ಮತ್ತು ಕಾಂತಾಮಣಿ, ಬಳ್ಳಾರಿಯ ಜಿಪಂ ಸದಸ್ಯ ಎಚ್.ಬಿ.ಪರಶುರಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕರಾವಳಿ ಕುರುಬರ ಸಂಘ ಮಂಗಳೂರು ಅಧ್ಯಕ್ಷ ಮಂಜುನಾಥ್ ನೋಟಗಾರ್, ಪ್ರಧಾನ ಕಾರ್ಯದರ್ಶಿ ನವೀನ್, ಕೋಶಾಧಿಕಾರಿ ನಿರಂಜನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News