×
Ad

ಅನ್ನಪೂರ್ಣಾ ಎಂ.ಭಟ್ ಅನುವಾದಿತ ಕೃತಿ ಲೋಕಾರ್ಪಣೆ

Update: 2019-11-17 21:11 IST

ಉಡುಪಿ, ನ. 17: ಹರಿದ್ವಾರದ ಪತಂಜಲಿ ಯೋಗ ಪೀಠದ ಆಚಾರ್ಯ ಬಾಲಕೃಷ್ಣ ಜೀ ಅವರು ಹಿಂದಿ ಭಾಷೆಯಲ್ಲಿ ರಚಿಸಿರುವ ‘ಆಯುರ್ವೇದ ರಹಸ್ಯ’ ಕೃತಿಯನ್ನು ಮಂಗಳೂರಿನ ಅನ್ನಪೂರ್ಣಾ ಮಹಾಬಲೇಶ್ವರ ಭಟ್ ಅವರು ಕನ್ನಡಕ್ಕೆೆ ಅನುವಾದಿಸಿದ್ದು, ಈ ಕೃತಿಯನ್ನು ನ.17ರಂದು ಪತಂಜಲಿ ಯೋಗ ಪೀಠದ ಬಾಬಾ ರಾಮ್‌ದೇವ್ ಅವರು ಶ್ರೀಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್‌ನಲ್ಲಿ ನಡೆದಿರುವ ಬೃಹತ್ ಯೋಗ ಶಿಬಿರದಲ್ಲಿ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ, ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎಸ್.ಮಹಾಬಲೇಶ್ವರ ಭಟ್ ಮತ್ತಿತರರು ಉಪಸ್ಥಿತ ರಿದ್ದರು.

ಕೃತಿಯ ಅನುವಾದಕಿ ಅನ್ನಪೂರ್ಣಾ ಎಂ.ಭಟ್ ಮಾತನಾಡಿ, ಆಯುರ್ವೇದ ಮೂಲತತ್ವಗಳನ್ನು ಅಳವಡಿಸಿಕೊಂಡು ಆರೋಗ್ಯಕರ ಜೀವನ ವನ್ನು ನಡೆಸಲು ಈ ಕೃತಿಯಲ್ಲಿ ವಿಶೇಷ ಟಿಪ್ಪಣಿಗಳನ್ನು ನೀಡಲಾಗಿದೆ. ಈ ವಿಶೇಷ ಅನುವಾದ ಕಾರ್ಯ ತನಗೆ ಸಂತಸವನ್ನು ನೀಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News