17 ಕಲಾವಿದರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ

Update: 2019-11-17 16:01 GMT

ಉಡುಪಿ, ನ.17: ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವಾದಲ್ಲಿ ಉಡುಪಿ ಯಕ್ಷಗಾನ ಕಲಾ ರಂಗದಿಂದ ಮುಂಬೈಯ ಪದವೀಧರ ಯಕ್ಷಗಾನ ಸಮಿತಿಗೆ ‘ಶ್ರೀವಿಶ್ವೇಶ ತೀರ್ಥ ಪ್ರಶಸ್ತಿ’ ಹಾಗೂ 17 ಮಂದಿ ಯಕ್ಷಗಾನ ಕಲಾವಿದರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪ್ರದಾನ ಮಾಡ ಲಾಯಿತು.

ಕಲಾವಿದರಾದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಚೇರ್ಕಾಡಿ ಮಂಜುನಾಥ ಪ್ರಭು, ಪೆರುವಾಯಿ ನಾರಾಯಣ ಭಟ್, ಕೆ.ನಾರಾಯಣ ಪೂಜಾರಿ ಉಜಿರೆ, ಕೆ.ಅಣ್ಣಿ ಗೌಡ ಬೆಳ್ತಂಗಡಿ, ಶೀನ ನಾಯ್ಕ ಬ್ರಹ್ಮೇರಿ, ಕೆ.ಪಿ.ಹೆಗಡೆ ಕೋಟ, ನಿಡ್ಲೆ ಗೋವಿಂದ ಭಟ್, ಆಜ್ರಿ ಗೋಪಾಲ ಗಾಣಿಗ, ಮೂರೂರು ವಿಷ್ಣು ಭಟ್, ಮಹಾಬಲ ದೇವಾಡಿಗ ಕಮಲಶಿಲೆ, ಪಡ್ರೆ ಕುಮಾರ ಕಟೀಲು, ಅನಂತ ಹೆಗಡೆ ನಿಟ್ಟೂರು, ಎಂ.ಶ್ರೀಧರ ಹೆಬ್ಬಾರ್, ತೋಡಿಕಾನ ವಿಶ್ವನಾಥ ಗೌಡ, ನಾಗಪ್ಪ ಗೌಡ ಗುಣವಂತೆ, ಲಕ್ಷ್ಮಣ ಕೋಟ್ಯಾನ್ ಸುಂಕದಕಟ್ಟೆ ಅವರಿಗೆ ಯಕ್ಷಗಾನ ಕಲಾರಂಗ ಮತ್ತು ರಮೇಶ್ ರಾವ್ ಸಾಲಿಗ್ರಾಮ ಅವರಿಗೆ ಯಕ್ಷ ಚೇತನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾ ಧೀಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಬಹುತೇಕರು ಯಕ್ಷಗಾನ ಕಲಾವಿದರ ಬಣ್ಣದ ಮುಖವನ್ನು ಮಾತ್ರ ನೋಡಿರುತ್ತಾರೆ. ಆದರೆ ಯಕ್ಷಗಾನ ಕಲಾರಂಗ ಕಲಾವಿದರ ಎರಡು ಮುಖವನ್ನು ತೋರಿಸಿದೆ. ಬಣ್ಣ ಹಚ್ಚಲು ಅವಕಾಶ ಕಲ್ಪಿಸುವುದರ ಜೊತೆಗೆ ಅವರ ಬಣ್ಣವನ್ನು ತೆಗೆದು ಪ್ರಶಸ್ತಿ ನೀಡುವ ಕೆಲಸವನ್ನು ಮಾಡುತ್ತಿದೆ ಎಂದರು.

ಕಲಾವಿದರೂ ತಮ್ಮ ಇಡೀ ಜೀವನವನ್ನು ಯಕ್ಷಗಾನ ಕಲೆಗಾಗಿ ವಿನಿಯೋಗಿ ಸುತ್ತಾರೆ. ತಮ್ಮ ಕಷ್ಟ, ನೋವು, ದುಮ್ಮಾನಗಳೆಲ್ಲವನ್ನೂ ಮರೆತು, ಬಣ್ಣ ಹಚ್ಚಿ ನಮ್ಮೆಲ್ಲರನ್ನು ಖುಷಿ ಪಡಿಸುತ್ತಾರೆ. ನಮ್ಮನ್ನು ರಂಜಿಸಿದ ಸಾಧಕರಿಗೆ ಇಂತಹ ಪ್ರಶಸ್ತಿ, ಸನ್ಮಾನಗಳು ಸಂದಾಗ ಮಾತ್ರ ಅವರ ದುಃಖ, ದುಮ್ಮಾನಗಳಿಗೆ ಪರಿಹಾರ ಸಿಗುತ್ತದೆ ಎಂದು ಅವರು ತಿಳಿಸಿದರು.

ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಯಕ್ಷಗಾನ ಕಲಾವಿದರಲ್ಲಿ ಇರುವ ಬಣ್ಣಗಾರಿಕೆ, ಹೆಜ್ಜೆಗಾರಿಕೆ, ಮಾತುಗಾರಿಕೆ, ಭಾಗವತಿಕೆಯ ಲಾಲಿತ್ಯ ಇವೆಲ್ಲವೂ ಅಸಾಧಾರಣವಾದ ಕಲೆ. ಪ್ರೇಕ್ಷಕರನ್ನು ದ್ವಾಪರಯುಗ, ತ್ರೇತಯುಗಕ್ಕೆ ಕರೆದೊಯ್ಯುವ ಯಕ್ಷಗಾನ ಕಲಾ ವಿದರು ಕಲಾ ತಪಸ್ವಿಗಳಾಗಿದ್ದಾರೆ ಎಂದರು.

‘ಕಲಾತರಂಗ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಅಧ್ಯಕ್ಷತೆ ವಹಿಸಿದ್ದ ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಡಾ.ಜಿ.ಶಂಕರ್ ಮಾತ ನಾಡಿ, ಯಕ್ಷಗಾನ ಕಲಾರಂಗ ಸಂಸ್ಥೆ ಯಕ್ಷಗಾನ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಬೇಕಿತ್ತು. ಆದರೆ ಅದು ತಪ್ಪಿಬೇರೆ ಕಡೆ ಹೋಗಿದೆ. ಆದ್ದರಿಂದ ಮುಂದಿನ ಬಾರಿ ಸಂಸ್ಥೆಗೆ ಪ್ರಶಸ್ತಿ ದೊರಕಿಸಿಕೊಡಲು ಪ್ರಯತ್ನ ವಾಡಲಾಗುವುದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಬಂಧಕ ಭಾಸ್ಕರ್ ಹಂದೆ, ಕರ್ನಾಟಕ ಬ್ಯಾಂಕಿನ ಮಹಾಪ್ರಬಂಧಕ ಚಂದ್ರಶೇಖರ ಎಂ. ಮುಂಬೈ ಪದವೀಧರ ಯಕ್ಷಗಾನ ಸಮಿತಿಯ ಅಧ್ಯಕ್ಷ ಎಚ್.ಬಿ.ಎಲ್.ರಾವ್ ಭಾಗವಹಿಸಿ ದ್ದರು. ಕಲಾರಂಗದ ಅಧ್ಯಕ್ಷ ಗಣೇಶ್ ರಾವ್ ಸ್ವಾಗತಿಸಿ ದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಶೃಂಗೇಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News