ಬಾಡಿಗೆ ದ್ವಿಚಕ್ರ ವಾಹನ ವಿರೋಧಿಸಿ ರಿಕ್ಷಾ ಬಂದ್

Update: 2019-11-17 16:02 GMT

ಉಡುಪಿ, ನ.17: ನಗರದಲ್ಲಿ ಕಾರ್ಯಾಚರಿಸುತ್ತಿರುವ ದ್ವಿಚಕ್ರ ವಾಹನ ಬಾಡಿಗೆ ಪದ್ಧತಿಯನ್ನು ವಿರೋಧಿಸಿ ಉಡುಪಿ ವಲಯದ ಆಟೋರಿಕ್ಷಾ ಚಾಲಕ ಮತ್ತು ಮಾಲಕ ಸಂಘ ನ.18ರಂದು ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆ ಯವರೆಗೆ ಆಟೋರಿಕ್ಷಾ ಬಂದ್‌ಗೆ ಕರೆ ನೀಡಿದೆ.

ಈ ಸಮಯದಲ್ಲಿ ನಗರದಲ್ಲಿ ಯಾವುದೇ ಅಟೋ ರಿಕ್ಷಾ ಸಂಚರಿಸುವುದಿಲ್ಲ. ಈ ಬಂದ್‌ಗೆ ಉಡುಪಿ ಜಿಲ್ಲಾ ಆಶ್ರಯದಾತ ಆಟೋ ಯೂನಿಯನ್ ಸಂಪೂರ್ಣ ಬೆಂಬಲ ನೀಡಿದೆ. ಈ ಬಂದ್‌ಗೆ ಆಟೋ ಚಾಲಕರು ತಮ್ಮ ರಿಕ್ಷಾ ವನ್ನು ನಿಲ್ಲಿಸಿ ಸಹಕಾರ ನೀಡಬೇಕು ಎಂದು ಯೂನಿಯನ್ ಜಿಲ್ಲಾಧ್ಯಕ್ಷ ಸಾಧಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News