ಸ್ಲಿಪ್ ವೇಯ ನಿರ್ವಹಣೆ ಮೀನುಗಾರ ಸಂಘಕ್ಕೆ ವಹಿಸಲು ಪ್ರಯತ್ನ : ಮಲ್ಪೆ ಬಂದರಿಗೆ ಭೇಟಿ ನೀಡಿದ ಸಚಿವ ಕೋಟ
ಉಡುಪಿ, ನ.17: ಮಲ್ಪೆ ಬಾಪುತೋಟ ಮೂರನೆ ಹಂತದ ಬಂದರಿನಲ್ಲಿ ರುವ ಸ್ಲಿಪ್ ವೇಯ ನಿರ್ವಹಣೆಯನ್ನು ಮೀನುಗಾರರ ಸಂಘಕ್ಕೆ ವಹಿಸಿಕೊಡುವ ನಿಟ್ಟಿನಲ್ಲಿ ಅದರ ಕಾನೂನು ತೊಡಕುಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದೆಂದು ರಾಜ್ಯ ಮೀನುಗಾರಿಕಾ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.
ಮಲ್ಪೆ ಮೀನುಗಾರಿಕೆ ಬಂದರಿಗೆ ಇಂದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಲ್ಪೆ ಮೀನುಗಾರ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಮೀನುಗಾರರ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಮೀನುಗಾರರ ಸಂಘ ಹಲವು ವರ್ಷಗಳಿಂದ ಸ್ಲಿಪ್ ವೇ ನಿರ್ಮಿಸುವಂತೆ ಹೋರಾಟ ಮಾಡಿಕೊಂಡು ಬಂದಿದೆ. ಆದರೆ ಸ್ಲಿಪ್ ವೇ ನಿರ್ಮಾಣವಾಗಿ ಮೂರು ವರ್ಷ ಕಳೆದರೂ ಈವರೆಗೆ ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ. ಇದರಿಂದ ಸ್ಲಿಪ್‌ವೇಯ ಎಲ್ಲಾ ಪರಿಕರಗಳು ಹಾಳಾಗುತ್ತಿವೆ. ಆದುದರಿಂದ ಮೀನುಗಾರರ ಬಹುಕಾಲದ ಬೇಡಿಕೆಯಂತೆ ಇದನ್ನು ವಿಶೇಷ ಪ್ರಕರಣ ಎಂಬು ದಾಗಿ ಪರಿಗಣಿಸಿ ಸ್ಲಿಪ್ ನಿರ್ವಹಣೆಯನ್ನು ಬೇರೆಯವರಿಗೆ ಗುತ್ತಿಗೆ ನೀಡದೆ, ಮೀನುಗಾರರ ಸಂಘಕ್ಕೆ ವಹಿಸಿಕೊಡಬೇಕು ಎಂದು ಸಭೆುಲ್ಲಿ ಮೀನುಗಾರರು ಒತ್ತಾಯಿಸಿದರು.
2015ರ ತಿದ್ದುಪಡಿ ಕಾಯ್ದೆಯಂತೆ ಮೀನುಗಾರರ ಸಂಘಕ್ಕೆ ಸ್ಲೀಪ್‌ವೇ ನಿರ್ವಹಣೆ ವಹಿಸಲು ಇರುವ ಕಾನೂನು ತೊಡಕುಗಳನ್ನು ಇಲಾಖೆ ಹಿರಿಯ ಅಧಿಕಾರಿಗಳು ಸಚಿವರಿಗೆ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ನಿಯಮಾವಳಿ ಮತ್ತು ಕಾನೂನು ತೊಡಕುಗಳ ಬಗ್ಗೆ ಪರಿಶೀಲಿಸಿ ಇದರ ನಿರ್ವಹಣೆಯನ್ನು ಸಂಘಕ್ಕೆ ವಹಿಸಿಕೊಡಲು ಸರಕಾರದ ಹಂತದಲ್ಲಿ ಗರಿಷ್ಠ ಪ್ರಯತ್ನ ಮಾಡಲಾಗುವುದು ಎಂದರು.
ಡಿಸೇಲ್ ಪ್ರಮಾಣ ಹೆಚ್ಚಳಕ್ಕೆ ಆಗ್ರಹ: ಮಲ್ಪೆ ಪಡುಕೆರೆಗೆ ನಬಾರ್ಡ್ ನಿಂದ ಮಂಜೂರಾದ 10 ಕೋಟಿ ರೂ. ವೆಚ್ಚದ ಜೆಟ್ಟಿಯನ್ನು ಬಂದರು ಇಲಾಖೆ ಜಾಗದಲ್ಲಿ ನಿರ್ಮಿಸಬೇಕು. ಯಾಂತ್ರಿಕೃತ ಮೀನುಗಾರಿಕಾ ದೋಣಿ ಗಳಿಗೆ ನೀಡುತ್ತಿರುವ ಡಿಸೇಲ್ ಪ್ರಮಾಣವನ್ನು 300 ಲೀಟರ್‌ನಿಂದ 400 ಲೀಟರ್‌ಗೆ ಹೆಚ್ಚಿಸಬೇಕು ಎಂದು ಮೀನುಗಾರರ ಸಂಘ ಸಚಿವರಿೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ.
ಮಲ್ಪೆ ಬಂದರಿನ ಒಳಗೆ ಮತ್ತು ನದಿಯಲ್ಲಿ ತುಂಬಿರುವ ಹೂಳನ್ನು ತೆಗೆಯುವ ಕಾರ್ಯ ಮಾಡಬೇಕು. ಯಾಂತ್ರಿಕೃತ ಮೀನುಗಾರಿಕಾ ದೋಣಿ ಗಳಿಗೆ ನೀಡುವ ಡಿಸೇಲ್ ಸಬ್ಸಿಡಿಯನ್ನು ಹಿಂದಿನ ಮಾದರಿಯಲ್ಲೇ ನೀಡಬೇಕು. ಮಲ್ಪೆ ಬಂದರಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕ, ಮಲ್ಟಿಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಮೀನುಗಾರ ಸಂಘ ಮನವಿಯಲ್ಲಿ ಆಗ್ರಹಿಸಿದೆ.
ಈ ಕುರಿತು ಶೀಘ್ರವೇ ಇಲಾಖಾಧಿಕಾರಿಗಳ ಸಭೆ ಕರೆದು ಬೇಡಿಕೆಗಳನ್ನು ಈಡೇರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಸಭೆಯಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ, ಮಲ್ಪೆ ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕ ಆರ್.ಚೇತನ್, ಮೀನುಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ, ನಿರ್ದೇಶಕ ರಾಮಕೃಷ್ಣ, ಬಂದರು, ಮೀನುಗಾರಿಕೆ ಇಲಾಖೆ ವಿ ವಿಧ ಅಧಿಕಾರಿಗಳು ಉಪಸ್ಥಿತರಿದ್ದರು.