ಕಾರ್‌ಬಾಂಬ್ ಸ್ಫೋಟ: 19 ಮಂದಿ ಮೃತ್ಯು

Update: 2019-11-17 17:55 GMT

ಬೈರೂತ್, ನ.16: ಉತ್ತರ ಸಿರಿಯದಲ್ಲಿ ಟರ್ಕ್ ಸೇನೆಯ ನಿಯಂತ್ರಣದಲ್ಲಿರುವ ಅಲ್-ಬಾಬ್ ಪಟ್ಟಣದಲ್ಲಿ ಶನಿವಾರ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಕನಿಷ್ಠ 13 ಮಂದಿ ನಾಗರಿಕರೆಂದು ತಿಳಿದುಬಂದಿದೆ.

ಅಲ್-ಬಾಬ್ ಪಟ್ಟಣದ ಬಸ್ ಹಾಗೂ ಟ್ಯಾಕ್ಸಿ ನಿಲ್ದಾಣದಲ್ಲಿ ಕಾರ್ ಬಾಂಬ್ ಸ್ಫೋಟಸಿದ್ದು, ಘಟನೆಯಲ್ಲಿ ಇತರ 33 ಮಂದಿಗೆ ಗಾಯಗಳಾಗಿವೆ. ಅವರಲ್ಲಿ ಕೆಲವರ ಪರಿಸ್ಥಿತಿ ಗಂಭೀರವಾಗಿದೆಯೆಂದು ಸಿರಿಯ ಮೂಲದ ಮಾನವಹಕ್ಕುಗಳ ಸಿರಿಯನ್ ಆಬ್ಸರ್ವೇಟರಿ ತಿಳಿಸಿದೆ.

2016-17,201 ಹಾಗೂ 2019ರ ನಡುವೆ ಸರಣಿ ಆಕ್ರಮಣಗಳನ್ನು ನಡೆಸಿದ ಟರ್ಕಿ ಸೇನೆ ಹಾಗೂ ಸಿರಿಯದಲ್ಲಿನ  ಅದರ ಬೆಂಬಲಿಗ ಪಡೆಗಳು ಉತ್ತರ ಸಿರಿಯದ ಹಲವಾರು ಪ್ರಾಂತಗಳನ್ನು ತಮ್ಮ ಅಧೀನದಲ್ಲಿರಿಸಿಕೊಂಡಿವೆ. ಈ ಬಾಂಬ್ ದಾಳಿಯ ಹೊಣೆಯನ್ನು ಯಾವುದೇ ಗುಂಪು ವಹಿಸಿಕೊಂಡಿಲ್ಲ. ಆದರೆ 2017ರ ಫೆಬ್ರವರಿಯಲ್ಲಿ ಈ ಪ್ರಾಂತವನ್ನು ಟರ್ಕಿ ಪಡೆಗಳು ಐಸಿಸ್‌ನಿಂದ ವಶಪಡಿಸಿಕೊಂಡ ಬಳಿಕ ಅಲ್ಲಿ ಹಲವಾರು ಭದ್ರತಾ ಸಮಸ್ಯೆಯ ಘಟನೆಗಳು ನಡೆದಿರುವುದಾಗಿ ವರದಿಗಳು ಹೇಳಿವೆ.

ಆದರೆ ಈ ದಾಳಿಯನ್ನು ಕುರ್ದಿಶ್ ಜನತಾ ರಕ್ಷಣಾ ದಳ (ವೈಪಿಜಿ) ನಡೆಸಿರುವುದಾಗಿ ಟರ್ಕಿ ಆಪಾದಿಸಿದೆ. ಕಳೆದ ತಿಂಗಳು ಟರ್ಕಿ ಪಡೆಗಳು ಉತ್ತರ ಸಿರಿಯದ ಗಡಿಪ್ರದೇಶದಲ್ಲಿ ಕುರ್ದಿಶ್ ಬಂಡುಕೋರರ ನೆಲೆಗಳ ಆಕ್ರಮಣವನ್ನು ನಡೆಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News