ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಮಕ್ಕಳ ದಿನಾಚರಣೆ, ಕೈಟ್ ಫೆಸ್ಟ್

Update: 2019-11-18 05:43 GMT

ಪುತ್ತೂರು : ಮೇನಾಲದ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಮಕ್ಕಳ ದಿನಾಚರಣೆ ಹಾಗೂ ಕೇಟ್ ಪೇಸ್ಟ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಶಾಲಾ ಸಂಚಾಲಕರಾದ ಕೆ.ಅಬೂಬಕ್ಕರ್ ಹಾಜಿ ಉದ್ಘಾಟಿಸಿದರು. ವಿದ್ಯಾರ್ಥಿಗಳು ತಾವೇ ತಯಾರಿಸಿದ ಬಣ್ಣ ಬಣ್ಣದ ಗಾಳಿಪಟಗಳನ್ನು ಬಾನೆತ್ತರದಲ್ಲಿ ಹಾರಿಸಿದರು.

ಕಾರ್ಯಕ್ರಮದಲ್ಲಿ ಮಕ್ಕಳೇ ಅತಿಥಿಗಳಾಗಿ ವೇದಿಕೆಯನ್ನು ಅಲಂಕರಿಸಿದ್ದರು. ಶಿಕ್ಷಕಿಯರು ವಿವಿಧ ರೀತಿಯ ಹಾಡುಗಳು ಹಾಗೂ ನೃತ್ಯದ ಮೂಲಕ ವಿದ್ಯಾರ್ಥಿಗಳಿಗೆ ಮನೋರಂಜನೆಯನ್ನು ನೀಡಿದರು.

ಮುಖ್ಯ ಶಿಕ್ಷಕಿ ಮಮತಾ ಮಕ್ಕಳ ದಿನಾಚರಣೆಯ ಸಂದೇಶವನ್ನು ನೀಡಿದರು. ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಆಟೋಟಗಳನ್ನು  ನಡೆಸಲಾಯಿತು.

ವಿದ್ಯಾರ್ಥಿ ನಾಯಕಿ ಫಾತಿಮತ್ ಸನಾ, ಉಪನಾಯಕ ಶಾಮಿಲ್ ಮಧುರಾ ಹನೀಫ್, ಮಂತ್ರಿಗಳಾದ ಫಾತಿಮತ್ ಮುಬಶ್ಶಿರಾ, ಅಹ್ಮದ್ ಸಿಮಾಕ್, ಮುಹಮ್ಮದ್ ಮುಬಾರಿಸ್, ಕದೀಜತುಲ್ ಕುಬ್ರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಸಂಚಾಲಕರಾದ ಕೆ.ಅಬೂಬಕ್ಕರ್ ಹಾಜಿ, ಅಧ್ಯಕ್ಷರಾದ ಹನೀಫ್ ಮಧುರಾ, ಆಡಳಿತಾಧಿಕಾರಿ ಮಹಮ್ಮದ್ ಸಾಮು, ಕ್ಯಾಂಪಸ್ ನಿರ್ದೇಶಕರಾದ ಅಬ್ದುಲ್ಲಾ ಮಧುರಾ, ಮುಖ್ಯ ಶಿಕ್ಷಕಿ ಮಮತಾ, ಶಿಕ್ಷಕಿಯರಾದ ಶ್ರೀ ಪ್ರಿಯಾ, ಅರ್ಚನಾ, ರೇಶ್ಮಾ,  ಅಶ್ವಿನಿ, ಶಿಕ್ಷಕೇತರ ವೃಂದದವರಾದ ಹನ್ನತ್, ರೋಹಿಣಿ, ಸುಶೀಲ, ತಾರಾ, ಇಬ್ರಾಹಿಂ, ರಿತೀಶ್, ಇಸ್ಮಾಯಿಲ್, ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕಿ ಕೌಸಲ್ಯ ಸ್ವಾಗತಿಸಿ, ನಿಶಾನ ವಂದಿಸಿದರು. ಉಪನ್ಯಾಸಕಿ ರಮ್ಲತ್.ಕೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News