ಕಿನ್ಯ: ಕೇಂದ್ರ ಮಸೀದಿಯ ಸಾರ್ವಜನಿಕ ಸ್ಥಳದಲ್ಲಿ ಹೈ ಮಾಸ್ಕ್ ದೀಪ ಉದ್ಘಾಟನೆ

Update: 2019-11-18 05:47 GMT

ಉಳ್ಳಾಲ : ಕಿನ್ಯ ಗ್ರಾಮ ಪಂಚಾಯತ್ 14ನೇ ಹಣಕಾಸಿನ ಅಡಿಯಲ್ಲಿ 1 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಿನ್ಯ ಕೇಂದ್ರ ಮಸೀದಿ ಬಳಿಯ ಹೈಮಾಸ್ಕ್ ದೀಪವನ್ನು ಕಿನ್ಯ ಗ್ರಾಪಂ ಉಪಾಧ್ಯಕ್ಷ ಸಿರಾಜುದ್ದೀನ್ ಅದ್ಯಕ್ಷತೆಯಲ್ಲಿ ಕೇಂದ್ರ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಹಾಜಿ  ಶನಿವಾರ ರಾತ್ರಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜಮಾಅತ್ ಹಿರಿಯರಾದ ಅಬೂಸಾಲಿ ಹಾಜಿ ಕುರಿಯಕ್ಕಾರ್, ಜಮಾಅತ್  ಕೋಶಾಧಿಕಾರಿ ಸಾದುಕುಂಜ್ಞಿ ಹಾಜಿ  , ದ.ಕ.ಜಿಲ್ಲಾ ಅಲ್ಪ ಸಂಖ್ಯಾತ ಕಾಂಗ್ರೆಸ್ ಕಾರ್ಯದರ್ಶಿ ಮೊಯಿದಿನ್ ಅಬ್ಬು, ಪಂಚಾಯತ್ ಸದಸ್ಯರಾದ ಮೊಹಮ್ಮದ್  ಅಬೂಸಾಲಿ ಕೆ.ಬಿ., ಫಾರೂಕ್ ಕಿನ್ಯ, ಹಮೀದ್ ಕುತುಬಿಯ, ಹಳೆ  ವಿದ್ಯಾರ್ಥಿ ಪದಾಧಿಕಾರಿಗಳಾದ ಮೊಯಿದೀನ್ ಎಂ.ನ್.ಶೇಕ್ ಇಬ್ರಾಹಿಂ, ಆರಿಫ್ ಎಂ.ಎನ್, ಸಿರಾಜ್ ಸಾಗ್, ಹಮೀದ್ ಕಜೆ, ಶಂಸುಲ್ ಉಲಮಾ ಅಕಾಡಮಿ ಕಾರ್ಯದರ್ಶಿ ಮಹಮ್ಮದ್ ಚಾಕಟ್ಟಪಡ್ಪು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News