ಮೌಲ್ಯಗಳನ್ನು ಕಾಪಾಡುವುದೇ ಮಾಧ್ಯಮಗಳಿಗೆ ಸವಾಲು: ಡಾ. ಮೋಹನ ಆಳ್ವ

Update: 2019-11-18 15:03 GMT

ಮಂಗಳೂರು, ನ.18: ಹೊಸ ಸವಾಲುಗಳನ್ನು ಎದುರಿಸುವಾಗ ಮೌಲ್ಯಗಳನ್ನು ಕಾಪಾಡುವುದೇ ಮಾಧ್ಯಮಗಳಿಗೆ ಬಹು ಮುಖ್ಯ ಸವಾಲು ಎಂದು ಆಳ್ವಾಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅಭಿಪ್ರಾಯಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ದ.ಕ. ಜಿಲ್ಲಾ ಕಾರ್ಯನಿತರ ಪತ್ರಕತ್ರರ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ನೂರು ವರ್ಷಗಳ ಅವಧಿಯಲ್ಲಿ ಮಾಧ್ಯಮದ ಬೆಳವಣಿಗೆ ವಿಸ್ತಾರವಾಗಿದೆ. ಪ್ರಸಕ್ತ ಕಾಲದಲ್ಲಿ ಹೂಡಿಕೆ ಸ್ಪರ್ಧೆಯ ನಡುವೆ ಮಾಧ್ಯಮಗಳ ಮೇಲೆ ನಿಯಂತ್ರಣ ಕಷ್ಟ ಸಾಧ್ಯ. ಮಾತ್ರವಲ್ಲದೆ ಮಾಧ್ಯಮಕ್ಕೆ ಪ್ರವೇಶಿಸುವ ಯುವ ಶಕ್ತಿಯು ಉತ್ಸಾಹದ ಭರದಲ್ಲಿ ಬರವಣಿಗೆಯ, ತಿಳುವಳಿಕೆಯ ಕೊರತೆ ಸಾಮಾನ್ಯ. ಬಹಳ ಜಾಗರೂಕತೆಯಿಂದ ಮುಂದೆ ಸಾಗಬೇಕಾಗಿದೆ. ಹಾಗೆಂದು ಋಣಾತ್ಮಕ ಚಿಂತನೆಯ ಅಗತ್ಯವಿಲ್ಲ. ಕಾಲವೇ ಎಲ್ಲವನ್ನೂ ನಿರ್ಧರಿಸುವುದರಿಂದ ಇಂತಹ ವ್ಯವಸ್ಥೆಯ ನಡುವೆಯೂ ಮಾಧ್ಯಮ ಯಾವುದಕ್ಕೂ ರಾಜಿಯಾಗದೆ ಮೌಲ್ಯವನ್ನು ಕಾಪಾಡೇಕಾಗಿದೆ ಎಂದು ಅವರು ಹೇಳಿದರು.

ಸಂಘದಿಂದ ಸನ್ಮಾನ ಸ್ವೀಕರಿಸಿದ ಭಾರತೀಯ ಕಾರ್ಯನಿರತರ ಪತ್ರಕರ್ತರ ಒಕ್ಕೂಟದ ಹೊಸದಿಲ್ಲಿಯ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಪತ್ರಿಕೋದ್ಯಮ ಇಲ್ಲದೆ ದೇಶವನ್ನು ಊಹಿಸಲು ಅಸಾಧ್ಯ. ಪತ್ರಿಕೋದ್ಯಮ ದಾರಿ ತಪ್ಪಿದರೆ ದೇಶ ಕುಲಗೆಟ್ಟು ಹೊೀಗಲಿದೆ ಎಂದವರು ಅಭಿಪ್ರಾಯಿಸಿದರು.

ಡಿವಿಜಿಯವರ ಆದರ್ಶಗಳು ಇಂದಿನ ಯುವ ಪತ್ರಕರ್ತರಿಗೆ ಆದರ್ಶವಾಗಬೇಕು ಎಂದು ಹೇಳಿದ ಅವರು, ಪತ್ರಿಕೋದ್ಯಮದಲ್ಲಿನ ಹಲವಾರು ಲೋಪ ದೋಷಗಳ ನಡುವೆಯೂ ಸತ್ಯವನ್ನು ಎತ್ತಿ ಹಿಡಿಯಬೇಕಾದುದು ಪತ್ರಿಕಾ ಧರ್ಮ. ಪತ್ರಕರ್ತನಾದವರಿಗೆ ಪತ್ರಕರ್ತನಾದನಿಗೆ ಸತ್ಯ ನಿಷ್ಠೆಯ ಸೇವೆಯೇ ಪ್ರಮುಖ ಎಂದು ಹೇಳಿದರು.

ವೇದಿಕೆಯಲ್ಲಿ ಸಾಹಿತಿ, ಹಂಪಿ ವಿವಿಯ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ, ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ವಿಜಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಸಮಾರಂಭದ ಬಳಿಕ ಪತ್ರಕರ್ತರಿಗಾಗಿ ಪುನಶ್ಚೇತನ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಅವರು ‘ಮಾಧ್ಯಮ ಮತ್ತು ಭವಿಷ್ಯದ ಸವಾಲು’ ಹಾಗೂ ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕ ಹೆಗಡೆಯವರು ‘ಮಾಧ್ಯಮ ಮತ್ತು ವೌಲ್ಯಗಳು’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಸಾಹಿತಿ ಹಾಗೂ ಹಂಪಿ ವಿವಿಯ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News