ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಒತ್ತಾಯಿಸಿ ಡಿವೈಎಫ್‍ಐ ಧರಣಿ

Update: 2019-11-18 11:50 GMT

ಬಂಟ್ವಾಳ, ನ. 18: ಬಡಜನರ ಪಾಲಿಕೆಗೆ ಹೈಟೆಕ್ ಆಸ್ಪತ್ರೆಯಾಗಿರುವ ಸರಕಾರಿ ಆಸ್ಪತ್ರೆಗಳಿಗೆ ಸೌಲಭ್ಯಗಳನ್ನು ನೀಡಲು ಸರಕಾರ ಹಿಂದೇಟು ಹಾಕುತ್ತಿದ್ದು, ಇದರ ಹಿಂದೆ ಖಾಸಗಿ ಲಾಭಿ ನಡೆದಿರುವ ಕುರಿತು ಸಂಶಯಗಳು ಕಾಡುತ್ತಿದೆ. ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ 50 ಶೇ.ಕ್ಕಿಂತಲೂ ಅಧಿಕ ಹುದ್ದೆಗಳು ಖಾಲಿ ತತ್‍ಕ್ಷಣ ಭರ್ತಿ ಮಾಡುವಂತೆ ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಗ್ರಹಿಸಿದರು.

ಅವರು ಸೋಮವಾರ ಬಂಟ್ವಾಳ ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಬಂಟ್ವಾಳ ತಾಲೂಕು ಡಿವೈಎಫ್‍ಐ ವತಿಯಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಗಳನ್ನು ಸರಿಪಡಿಸಲು ಒತ್ತಾಯಿಸಿ ನಡೆದ ಧರಣಿನಿರತರನ್ನುದ್ದೇಶಿಸಿ ಮಾತನಾಡಿದರು.

ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಒದಗಿಸುವುದು ಸರಕಾರಗಳ ಕರ್ತವ್ಯವಾಗಿದೆ. ಬಂಟ್ವಾಳ ಸರಕಾರಿ ಆಸ್ಪತ್ರೆಯು ಹಲವು ಸಮಸ್ಯೆಗಳಿಂದ ಕೂಡಿದ್ದು, ಸಮಸ್ಯೆಗಳ ಪರಿಹಾರವಾಗದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ ಮಾತನಾಡಿ, ಇಲ್ಲಿನ ಜನಪ್ರತಿನಿಧಿಗಳು ಜನರ ಸಮಸ್ಯೆ ಪರಿಹರಿಸುವುದರ ಬದಲು ಜಾತಿ ಧರ್ಮದ ಹೆಸರಿನಲ್ಲಿ ಜನರನ್ನು ಕಚ್ಚಾಡುವಂತೆ ಮಾಡಿ, ಜನರನ್ನು ನೈಜ ಸಮಸ್ಯೆಗಳ ಕುರಿತು ಯೋಚನೆ ಮಾಡದಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಾಲೂಕು ಅಧ್ಯಕ್ಷ ಸುರೇಂದ್ರ ಕೋಟ್ಯಾನ್ ಬಂಟ್ವಾಳ, ದೇವದಾಸ್ ಕುಲಾಲ್, ರತ್ನಾಕರ ಜಕ್ರಿಬೆಟ್ಟು, ಸಾಮಾಜಿಕ ಹೋರಾಟಗಾರ ರಾಜ ಚೆಂಡ್ತಿಮಾರ್, ಡಿವೈಎಫ್‍ಐ ಮಾಜಿ ಮುಖಂಡರಾದ ಉದಯಕುಮಾರ್ ಬಂಟ್ವಾಳ, ಜನಾರ್ಧನ ಕುಲಾಲ್, ಸಾಧಿಕ್ ಬಂಟ್ವಾಳ, ಸೌಕತ್ ಅಲಿ ಖಾನ್, ಪುರಸಭಾ ಸದಸ್ಯ ಗಂಗಾಧರ ಪೂಜಾರಿ, ಕಾರ್ಮಿಕ ಮುಖಂಡರಾದ ಸಂಜೀವ ಬಂಗೇರ, ಲಿಯಕತ್ ಖಾನ್, ಪ್ರಜಾ ಪರಿವರ್ತನಾ ವೇದಿಕೆಯ ಕೃಷ್ಣಪ್ಪ ಪುದ್ದೊಟ್ಟು, ನಾರಾಯಣ, ಮಹಿಳಾ ಸಂಘಟನೆಯ ಪ್ರಮುಖರು ಭಾಗವಹಿಸಿದ್ದರು.

ವಕೀಲ ತುಳಸೀದಾಸ್ ವಿಟ್ಲ ಸ್ವಾಗತಿಸಿದರು. ಬಳಿಕ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆರೋಗ್ಯ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News