ಅಯೋಧ್ಯೆ ತೀರ್ಪು; ಮರುಪರಿಶೀಲನಾ ಅರ್ಜಿಯಿಂದ ಲಾಭ ಇಲ್ಲ: ಬಾಬಾ ರಾಮ್‌ದೇವ್

Update: 2019-11-18 16:18 GMT

ಉಡುಪಿ, ನ.18: ಸುಪ್ರೀಂ ಕೋರ್ಟಿನ ಅಯೋಧ್ಯೆ ತೀರ್ಪಿಗೆ ಸಂಬಂಧಿಸಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮರು ಪರಿಶೀಲನಾ ಅರ್ಜಿ ಹಾಕಲು ಸ್ವತಂತ್ರವಾಗಿದೆ ಮತ್ತು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಮರು ಪರಿ ಶೀಲನಾ ಅರ್ಜಿ ಹಾಕುವುದರಿಂದ ಯಾವುದೇ ಹೆಚ್ವಿನ ಲಾಭವಿಲ್ಲ. ಇದರಿಂದ ಮುಸ್ಲಿಮರಿಗೆ ಹಿಂದುಗಳ ಬಗ್ಗೆ ಅಸಹಿಷ್ಣುತೆ ಇದೆ ಎಂಬ ತಪ್ಪು ಸಂದೇಶ ನೀಡಿ ದಂತಾಗುತ್ತದೆ ಎಂದು ಯೋಗಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸುಪ್ರೀಂ ಕೋರ್ಟ್ ಆದೇಶ ಒಪ್ಪುದಿಲ್ಲ ಎಂದು ಹೇಳುವುದು ಸರಿಯಲ್ಲ. ಇದರಿಂದ ರಾಮಮಂದಿರ ನಿರ್ಮಾಣ ಕಾರ್ಯ ವಿಳಂಬ ಆಗುವುದಿಲ್ಲ. ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಶೀಘ್ರವೇ ವಿಲೇವಾರಿಮಾಡಲಿದೆ ಎಂಬ ವಿಶ್ವಾಸ ಇದೆ ಎಂದರು.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸುಪ್ರೀಂ ಕೋರ್ಟ್ ಆದೇಶ ಒಪ್ಪುದಿಲ್ಲ ಎಂದು ಹೇಳುವುದು ಸರಿಯಲ್ಲ. ಇದರಿಂದ ರಾಮಮಂದಿರ ನಿರ್ಮಾಣ ಕಾರ್ಯ ವಿಳಂಬ ಆಗುವುದಿಲ್ಲ. ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಶೀಘ್ರವೇ ವಿಲೇ ವಾರಿ ಮಾಡಲಿದೆ ಎಂಬ ವಿಶ್ವಾಸ ಇದೆ ಎಂದರು. ತುಳಸಿಯಿಂದ ಮೊಬೈಲ್ ವಿಕಿರಣ ತಡೆಯಬಹುದು ಎಂಬ ಹೇಳಿಕೆಗೆ ವಿಚಾರವಾದಿಗಳ ವಿರೋಧ ವ್ಯಕ್ತಪಡಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಾಬಾ ರಾಮ್‌ದೇವ್, ತುಳಸಿಯಿಂದ ಮೊಬೈಲ್ ವಿಕಿರಣ ಕಡಿಮೆ ಆಗುತ್ತದೆ. ಇದನ್ನು ಯಾರು ಕೂಡಾ ಪ್ರಾಯೋಗಿಕವಾಗಿ ಪ್ರಯತ್ನಿಸಬಹುದು. ವೈಜ್ಞಾನಿಕ ಸಂಶೋಧನೆಗೆ ಕೆಲವು ಬಾರಿ ಸಮಯ ಹಿಡಿಯ ಬಹುದು ಎಂದು ತಿಳಿಸಿದರು.

ಕೆಲವರಿಗೆ ತುಳಸಿ, ದನ, ವೇದದ ಬಗ್ಗೆ ಮಾತನಾಡಿದರೆ ಸರಿ ಅನಿವುಸುದಿಲ್ಲ. ಅದನ್ನು ಸುಳ್ಳು ಎಂಬುದು ಸಾಬೀತು ಮಾಡುವ ತರಾತುರಿಯಲ್ಲಿ ಇರುತ್ತಾರೆ. ವೇದದಲ್ಲಿ ವೈಜ್ಞಾನಿಕ ಸತ್ಯಗಳು ಅಡಗಿವೆ. ವಿಕಿರಣ ತಡೆಯುವ ಗುಣ ತುಳಸಿಗೆ ಇದೆ ಎಂಬುದನ್ನು ನಾನು ಮನುಷ್ಯನ ಮೇಲೆ ಪ್ರಯೋಗ ಮಾಡಿ ನೋಡಿದ್ದೇನೆ ಎಂದು ಅವರು ಹೇಳಿದರು.

ಪೆರಿಯಾರ್ ವಿಚಾರವಾದಿ ಭಯೋತ್ಪಾದಕ ಎಂಬ ಬಾಬಾ ರಾಮ್‌ದೇವ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪೆರಿಯಾರ್ ದೇವಿ, ದೇವತೆಗಳು ಸುಳ್ಳು, ವ್ಯಭಿಚಾರಿಗಳು ಎಂದು ಹೇಳಿದ್ದರು. ದೇವತೆಗಳಿಗೆ ಚಪ್ಪಲಿ ಹಾರ ಹಾಕಿ ಎಂದು ಕರೆ ನೀಡಿದ್ದರು. ನಾನು ಪೆರಿಯಾರ್‌ಗೆ ಚಪ್ಪಲ್ಲಿಯಲ್ಲಿ ಹೊಡೆಯಿರಿ ಎಂದು ಹೇಳಿದರೆ ಸರಿಯಾಗು ತ್ತದೆಯೇ. ಪೆರಿಯಾರ್ ಅವರ ವಿಚಾರಧಾರೆಯ ಬಗ್ಗೆ ನನ್ನ ವಿರೋಧ ಇದೆಯೇ ಹೊರತು ಪೆರಿಯಾರ್ ಬಗ್ಗೆ ಅಲ್ಲ. ಅವರು ನಮ್ಮ ಪೂರ್ವಜರಿಗೆ ಅವಮಾನಿ ಸುುದು ಸರಿಯೇ ಎಂದು ಪ್ರಶ್ನಿಸಿದರು.

ಈ ವಿಚಾರದಲ್ಲಿ ದಲಿತರು ಅನಗತ್ಯವಾಗಿ ನನಗೆ ಬೈದಿದ್ದಾರೆ. ನನಗೆ ಚಪ್ಪಲಿ ಯಲ್ಲಿ ಹೊಡೆಯುವುದಾಗಿ ಹೇಳುತ್ತಿದ್ದಾರೆ. ಆದರೆ ನಾನು ಅಂಬೇಡ್ಕರ್ಗೆ ಅವಮಾನ ಮಾಡಿಲ್ಲ. ಅಂಬೇಡ್ಕರ್ ಜಾತಿಮುಕ್ತ ಭಾರತ ಸಮರ್ಥನೆ ಮಾಡಿ ದವರು. ಆದರೆ ಅಂಬೇಡ್ಕರ್ ಅನುಯಾಯಿಗಳ ವಾದ ನಾನು ಒ್ಪುದಿಲ್ಲ ಎಂದು ಅವರು ಹೇಳಿದರು.

ನಮ್ಮ ಸಮಾಜದಲ್ಲಿ ಅಸಮಾನತೆ ಇದ್ದಿರುವುದು ಸತ್ಯ. ಆದರೆ ಎಲ್ಲದಕ್ಕೂ ಬ್ರಾಹ್ಮಣರೇ ಹೊಣೆ ಎಂದು ಹೇಳುವುದು ಎಷ್ಟು ಸರಿ. ನಮ್ಮ ಪ್ರಾಚೀನ ಪರಂಪರೆ, ರಾಮ, ಕೃಷ್ಣ ಎಲ್ಲರೂ ಸುಳ್ಳು ಎಂದು ಹೇಳುತ್ತಾರೆ ಎಂದ ಅವರು, ಬ್ರಾಹ್ಮಣರು, ಕ್ಷತ್ರೀಯರು, ವೈಶ್ಯರು ಹೊರಗಿಂದ ಬಂದವರಲ್ಲ. ನಾವೆಲ್ಲ ಭಾರತೀಯರು. ಈ ಬಗ್ಗೆ ಬೇಕಾದರೆ ನಮ್ಮನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿ ಸಲಿ. ಇದು ವೈಚಾರಿಕ ಭಯೋತ್ಪಾಧನೆಯಾಗಿದೆ. ನನ್ನ ಹೇಳಿಕೆ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News