ಮಣಿಪಾಲ: ವೈದ್ಯೆಯ ಬ್ಯಾಗ್ ಸುಲಿಗೆ

Update: 2019-11-18 16:34 GMT

ಮಣಿಪಾಲ, ನ.18: ಅಪರಿಚಿತರಿಬ್ಬರು ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವೈದ್ಯೆ ಯೊಬ್ಬರ ಬ್ಯಾಗ್ ಸುಲಿಗೆ ಮಾಡಿರುವ ಘಟನೆ ನ.17ರಂದು ರಾತ್ರಿ 8.45ರ ಸುಮಾರಿಗೆ ಮಣಿಪಾಲ ಸೋನಿಯಾ ಕ್ಲಿನಿಕ್ ಬಳಿ ನಡೆದಿದೆ.

ಮಣಿಪಾಲದ ಡಾ.ಶಾಲಿನಿ ಶರ್ಮ(30) ಎಂಬವರು ಸ್ಕೂಟರ್‌ನಲ್ಲಿ ಮಣಿಪಾಲ ಸಿಂಡಿಕೇಟ್ ಸರ್ಕಲ್ -ಅನಂತ ನಗರ ರಸ್ತೆಯಲ್ಲಿ ಹೋಗುತ್ತಿರುವ ಹಿಂದಿನಿಂದ ಬೈಕಿನಲ್ಲಿ ಬಂದ ಅಪರಿಚಿತರಿಬ್ಬರು ಡಾ ಶಾಲಿನಿ ಶರ್ಮ ಅವರ ವ್ಯಾನಿಟಿ ಬ್ಯಾಗನ್ನು ಎಳೆದು ಪರಾರಿಯಾಗಿದ್ದಾರೆ.

ಬ್ಯಾಗ್‌ನಲ್ಲಿ ಸುಮಾರು 12,000 ರೂ. ಮೌಲ್ಯದ ಮೊಬೈಲ್ ಪೋನ್, 3 ಎಟಿಎಂ ಕಾರ್ಡ್‌ಗಳು, ಆಧಾರ್ ಕಾರ್ಡ್, ಪಾನ್‌ಕಾರ್ಡ್, ಡಿಎಲ್, ಮಾಹೆ ಕಾರ್ಡ್, ಪ್ಲಾಟ್ ಕೀಗಳಿದ್ದವು. ಈ ಬಗ್ಗೆ ಮಣಿಪಾಲ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News