ಮಧುಮೇಹ ಭಾದಿತರ ಆರೈಕೆಗೆ ಮಿನಿ ಲ್ಯಾಬ್ ಘಟಕ ಉದ್ಘಾಟಣೆ

Update: 2019-11-18 17:02 GMT

ಕೊಣಾಜೆ: ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ ಸಾಮಾನ್ಯ ಶಸ್ತ್ರಕ್ರಿಯಾ ವಿಭಾಗದ ಆಶ್ರಯದಲ್ಲಿ ಮಧುಮೇಹ ಭಾದಿತ ರೋಗಿಗಳ ಪಾದ ಮತ್ತು ಕಾಲಿನ ಆರೈಕೆ  ಮಿನಿ ಲ್ಯಾಬ್ ಘಟಕ ಉದ್ಘಾಟನೆಗೊಂಡಿತು. 

ನೂತನ ಘಟಕವನ್ನು ಯೆನೆಪೋಯ ವಿಶ್ವವಿದ್ಯಾಲಯದ ವೈ.ಅಬ್ದುಲ್ ಕುಂಞಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಉಪಕುಲಪತಿಗಳಾದ ಡಾ.ಯಂ.ವಿಜಯಕುಮಾರ್, ಕುಲಸಚಿವರಾದ ಡಾ. ಗಂಗಾಧರ ಸೋಮಯಾಜಿ, ಯೆನೆಪೋಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಮೂಸಬ್ಬ, ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಪದ್ಮನಾಭ ಸಂಪತ್ತಿಲ, ಆಸ್ಪತ್ರೆ ಆಡಳಿತ ವಿಭಾಗದ ಮುಖ್ಯಸ್ಥೆ ಡಾ. ಸುನಿತಾ ಸಲ್ಡಾನ್ಹ, ಸಾಮಾನ್ಯ ಶಶ್ತ್ರ ಕ್ರಿಯಾ ವಿಭಾಗದ ಮುಖ್ಯಸ್ಥರಾದ ಡಾ. ಆಮಿರ್ ಆಲಿ, ಹಾಗೂ ವಿಭಾಗದ ಎಲ್ಲಾ ಪ್ರ್ರಾಧ್ಯಾಪಕ ವೈದ್ಯರುಗಳು, ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

ನೂತನವಾಗಿ ಆರಂಭಗೊಂಡ ಘಟಕದಲ್ಲಿ  ಮಿನಿಲ್ಯಾಬ್ ಎಂಬ ಯಂತ್ರದ ಸಹಾಯದಿಂದ ಪ್ರಥಮ ಹಂತದಲ್ಲಿಯೇ ಕಾಯಿಲೆಯ ತೀವ್ರತೆಯನ್ನು ಮಾಪನ ಮಾಡಿ ಮಧುಮೇಹ ಭಾದಿತರಿಗೆ ತನ್ನ ಶರೀರದ ಎಲ್ಲಾ ಅಂಗಾಂಗಗಳೊಂದಿಗೆ ಮುಖ್ಯವಾಗಿ ತನ್ನ ಕಾಲು ಮತ್ತು ಪಾದದೊಂದಿಗೆ ಬೆರಳುಗಳ ಕೊಳೆಯುವಿಕೆಯನ್ನು ತಡೆಗಟ್ಟಿ ಶರೀರದ ಮುಖ್ಯ ಅಂಗವಾದ ಕಾಲನ್ನು ಉಳಿಸಿಕೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News