ಕಾರ್ಕಳ ಕ್ಷೇತ್ರ ಸರ್ವಾಗೀಣ ಅಭಿವೃದ್ಧಿಗೆ ರಾಜ್ಯ ಸರಕಾರ ಕಟಿಬದ್ಧ : ಸಚಿವ ಬಸವರಾಜ ಬೊಮ್ಮಾಯಿ

Update: 2019-11-18 17:22 GMT

ಕಾರ್ಕಳ: ಕಾರ್ಕಳ ಕ್ಷೇತ್ರ ಸರ್ವಾಗೀಣ ಅಭಿವೃದ್ಧಿಗೆ ಸರಕಾರದಿಂದ ಎಲ್ಲ ರೀತಿಯಲ್ಲಿ ನೆರವು ನೀಡುವಲ್ಲಿ ರಾಜ್ಯ ಸರಕಾರ ಕಟಿಬದ್ಧವಾಗಿದೆ. ಕಾರ್ಕಳ ತಾಲೂಕು ಒಳಾಂಗಣ ಕ್ರೀಡಾಂಗಣಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ಶ್ರಮಿಸುತ್ತೇನೆ ಎಂದು  ಕರ್ನಾಟಕ ಸರ್ಕಾರದ ಗೃಹ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. 

ದೇವರಾಜ ಅರಸು ಭವನ ಉದ್ಘಾಟನೆ, ಮಂದಿರದ ಆವರಣದಲ್ಲಿ ಗಣ್ಯ ವ್ಯಕ್ತಿಗಳ ಹೊಸ ಪ್ರವಾಸಿ ಮಂದಿರ ನಿರ್ಮಾಣ,  ಕಾರ್ಕಳ ತಾಲೂಕು ಕ್ರಿಡಾಂಗಣದಲ್ಲಿ ನಿರ್ಮಿಸಲಾದ ಈಜುಕೊಳ, ವಿಕಾಸ ವಿವಿದ್ಧೋದ್ಧೇಶ ಸೌಹಾರ್ದ ಸಹಕಾರಿ(ನಿ) ಕಾರ್ಕಳ, ಶುಭಂ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಶಿವಮೊಗ್ಗ ಸಂಯುಕ್ತ ಆಶ್ರಯದಲ್ಲಿ ವಿಕಾಸ ಸ್ತ್ರೀಧನ್ ಇವುಗಳ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಉತ್ಸುಹಕತೆಯುಳ್ಳ ಶಾಸಕರಲ್ಲಿ ವಿ.ಸುನೀಲ್‍ಕುಮಾರ್ ಓರ್ವರಾಗಿದ್ದಾರೆ. ಅಂತವರ ಆಯ್ಕೆ ಪ್ರಕ್ರಿಯೆಯಿಂದ ಕ್ಷೇತ್ರದ ಪ್ರಗತಿ ನಾಗಟೋಟದಲ್ಲಿ ಮುನ್ನೆಡೆಯಲಿದೆ. ನಾಗರಿಕರ ಸಹಕಾರವು ಅಗತ್ಯವಾಗಿದೆ ಎಂದರು. ಈಜು ಸೇರಿದಂತೆ ಇತರ ಕ್ರೀಡೆಗಳು ಮಾನವನ ದೈಹಿಕ ಹಾಗೂ ಮಾನಸಿಕ ದೃಢತೆಯನ್ನು ಹೆಚ್ಚಿಸುವ ಕಾರ್ಯ ನಡೆಸುತ್ತದೆ. ಬಾಲ್ಯದಲ್ಲಿ ಕ್ರೀಡಾಸಕ್ತಿ ಬೆಳೆಸಬೇಕು. ಅದಕ್ಕೆ ಹೆತ್ತವರ ಪ್ರೋತ್ಸಾಹ ನಿರಂತರವಾಗಿರಬೇಕು ಎಂದರು.

ಯಾವುದೇ ಯೋಜನೆಗಳಲ್ಲಿ ನರ್ವಹಣೆ ಎಂಬುವುದು ಅತೀ ಅಗತ್ಯ. ಸಮರ್ಪಕ ನಿರ್ವಹಣೆ ಇಲ್ಲದೇ ಹೋದಾಗ ಯೋಜನೆ ನಿಷ್ಪಯೋಜಕ ಎಂಬ ಆರೋಪಕ್ಕೆ ಗುರಿಯಾಗುತ್ತದೆ.  ಸರಕಾರದ ಸಚೇತಕ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ,  1.64 ಕೋಟಿ ರೂ. ವೆಚ್ಚದಲ್ಲಿ ಈ ಈಜುಕೊಳ ನಿರ್ಮಾಣವಾಗಿದೆ. ಮಲೆನಾಡು ಅಭಿವೃದ್ದಿ ನಿಧಿ, ಕ್ರೀಡಾಕೂಟದ ಯೋಜನೆಗಳು ಹಾಗೂ ಶಾಸಕರ ನಿಧಿಯನ್ನು ಬಳಕೆ ಮಾಡಲಾಗಿದೆ. ಪ್ರಸ್ತುತ ಒಳ ಕ್ರೀಡಾಂಗಣ ನಿರ್ಮಾಣದ ಯೋಜನೆ ನಮ್ಮ ಮುಂದಿದ್ದು, 3.50 ಕೋಟಿ ರೂ. ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗಿದ್ದು, ಶೀಘ್ರದಲ್ಲೇ ಅನುದಾನ ಬಿಡುಗಡೆಗೊಳ್ಳಲಿದೆ ಎಂದರು. 

ಹೆಲಿಕಾಪ್ಟರ್  ಬಂದ ಬೊಮ್ಮಾಯಿ 

ದಾವಣಗೆರೆಯಿಂದ ಕಾರ್ಕಳ ಅಗಮಿಸಲು ಗೃಹ ಸಚಿವ ಬೊಮ್ಮಾಯಿ ಅವರು ವಾಯುಮಾರ್ಗ ಉಪಯೋಗಿಸಿದರು. ಸಂಜೆ 5.15ರ ವೇಳೆಗೆ ಅವರು ಹೆಲಿಕಾಪ್ಟರ್ ಮೂಲಕ ಅಗಮಿಸಿದ್ದು, ಇದೇ ಸಂದರ್ಭದಲ್ಲಿ ಶಾಸಕ ಹಾಗೂ ಸರಕಾರದ ಮುಖ್ಯಸಚೇತಕ ವಿ.ಸುನೀಲ್‍ಕುಮಾರ್ ನೇತೃತ್ವದಲ್ಲಿ ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಕ್ಷೇತ್ರಾಧ್ಯಕ್ಷ ಮಣಿರಾಜ್ ಶೆಟ್ಟಿ ಮೊದಲಾದವರು  ಹೂ ಗುಚ್ಛ ನೀಡಿ ಬರಮಾಡಿಕೊಂಡರು. ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ಅರುಣ್ ಚಕ್ರವರ್ತಿ ಅವರು ಗೌರವ ರಕ್ಷೆ ನೀಡಿ ಬರಮಾಡಿದರು. 
 
ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಶಾಸಕ ಹಾಗೂ ಸರ್ಕಾರಿ ಮುಖ್ಯ ಸಚೇತಕ ವಿ.ಸುನೀಲ್‍ಕುಮಾರ್ ವಹಿಸಿದರು. ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ  ದಿನಕರ ಭಾಬು, ಶಾಸಕರಾದ ರಘುಪತಿ ಭಟ್, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ,ಜಿಲ್ಲಾ ಪಂಚಾಯತ್ ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷ ಸುಮಿತ್ ಬೈಲೂರು, ತಾಲೂಕು ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಕರಾವಳಿ ಹಾಗೂ ನಕ್ಸಲ್ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿ ಚೇತನ್, ಕಾರ್ಕಳ ಎಎಸ್ಪಿ ಕೃಷ್ಣಕಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಗುರುಪ್ರಸಾದ್, ಮುಖ್ಯ ಇಂಜಿನಿಯರ್ ಹೆಚ್.ಸಿ. ರಮೇಂದ್ರ, ಸಹಕಾರಿ ಭಾರತಿ ಜಿಲ್ಲಾಧ್ಯಕ್ಷ ಸದಾಶಿವ ಶೆಟ್ಟಿ, ಶುಭಂ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಶಿವಮೊಗ್ಗ ಇದರ ಅಧ್ಯಕ್ಷ ಶ್ರೀಧರ್ ಹೆಗ್ಡೆ ಇದೇ ಸಂದರ್ಭ ತಾ.ಪಂ.ಸದಸ್ಯ ಪ್ರವೀಣ್ ಕೋಟ್ಯಾನ್ ಹಾಗೂ ನಿರ್ಮಿತಿ ಕೇಂದ್ರದ ಅರುಣ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.

ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು, ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News