‘ಡಿ.1ರಿಂದ ಜಿಲ್ಲೆಯ ಎಲ್ಲಾ ಟೋಲ್‌ಗಳಲ್ಲಿ ಪಾಸ್ಟ್‌ಟ್ಯಾಗ್ ಕಡ್ಡಾಯ’

Update: 2019-11-20 15:32 GMT

ಉಡುಪಿ, ನ.20: ಮುಂದಿನ ಡಿಸೆಂಬರ್ 1ರಿಂದ ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ಎಲ್ಲಾ ಟೋಲ್‌ಗಳಲ್ಲಿ ಪಾಸ್ಟ್‌ಟ್ಯಾಗ್ ಅಳವಡಿಕೆ ಕಡ್ಡಾಯ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ದ್ವಿಚಕ್ರ ವಾಹನ ಮತ್ತು ಆಟೋರಿಕ್ಷಾಗಳನ್ನು ಹೊರತುಪಡಿಸಿ ಎಲ್ಲಾ ವಾಹನಗಳ ಮಾಲಕರು ತಮ್ಮ ವಾಹನಗಳಿಗೆ ಪಾಸ್ಟ್‌ಟ್ಯಾಗ್ ಕಡ್ಡಾಯವಾಗಿ ಅಳವಡಿಸಬೇಕೆಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಉಡುಪಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನದ ಟೋಲ್‌ಗಳಲ್ಲಿ ಸಹ ಪಾಸ್ಟ್ ಟ್ಯಾಗ್ ಕಡ್ಡಾಯವಾಗಲಿದ್ದು, ಪಾಸ್ಟ್ ಟ್ಯಾಗ್ ಸೌಲಭ್ಯ ಪಡೆಯದ ವಾಹನಗಳು ನಿಗದಿತ ಟೋಲ್ ಶುಲ್ಕದ ಎರಡು ಪಟ್ಟು ಟೋಲ್ ಶುಲ್ಕ ನೀಡಬೇಕಾಗುತತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪಾಸ್ಟ್‌ಟ್ಯಾಗ್ ಸೌಲಭ್ಯ ವನ್ನು ಎಲ್ಲಾ ಟೋಲ್‌ಗಳಲ್ಲಿ ಮತ್ತು ಸಂಬಂಧಿಸಿದ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಪಡೆಯಬಹುದು. ವಾಹನಗಳಿಗೆ ಪಾಸ್ಟ್‌ಟ್ಯಾಗ್ ಅಳವಡಿಸುವುದರಿಂದ ಟೋಲ್‌ಗಳಲ್ಲಿ ಹಣ ನೀಡದೇ ಸಂಚರಿಸ ಬಹುದಾಗಿದ್ದು, ಟೋಲ್‌ಗಳಲ್ಲಿ ವಾಹನಗಳ ನಿಲುಗಡೆ ದಟ್ಟಣೆ ಕಡಿಮೆ ಯಾಗಲಿದೆ. ಪ್ರತಿ ಟೋಲ್ ಸಂಚಾರದ ಕುರಿತು ಮೊಬೈಲ್‌ಗೆ ಎಸ್‌ಎಂಎಸ್ ಸಹ ಬರಲಿದೆ ಎಂದವರು ಹೇಳಿದರು.

ಪಾಸ್ಟ್ ಟ್ಯಾಗ್ ಅಳವಡಿಸಿರುವ ವಾಹನ ಟೋಲ್ ಬಳಿ ಬಂದ ಕೂಡಲೇ ವಾಹನಕ್ಕೆ ಅಂಟಿಸಿರುವ ಸ್ಟಿಕರ್‌ನ ಬಾರ್ ಕೋಡ್ ಸ್ಕಾನ್ ಆಗಿ, ಸಂಬಂದಪಟ್ಟ ವಾಹನದ ಮಾಲಕನ ಬ್ಯಾಂಕ್ ಖಾತೆಯಿಂದ ನಿಗದಿತ ಟೋಲ್ ಶುಲ್ಕ ಕಡಿತಗೊಳ್ಳುವ ಮೂಲಕ ಟೋಲ್ ಶುಲ್ಕ ಪಾವತಿಯಾಗಲಿದ್ದು, ಶೇ.2.5ರಷ್ಟು ಕ್ಯಾಶ್‌ಬ್ಯಾಕ್ ಸೌಲ್ಯ ಸ ಲಭಿಸಲಿದೆ ಎಂದವರು ವಿವರಿಸಿದರು.

ಪಾಸ್ಟ್ ಟ್ಯಾಗ್ ಅಳವಡಿಸಲು ವಾಹನಗಳ ಮಾಲಕರು ತಮ್ಮ ವಾಹನದ ಆರ್‌ಸಿ, ಆಧಾರ್‌ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್‌ನೊಂದಿಗೆ ನೊಂದಣಿ ಮಾಡಬೇಕಿದ್ದು, ಈ ಸೌಲ್ಯವು ಎಲ್ಲಾ ಟೋಲ್‌ಗಳಲ್ಲಿ ಮತ್ತು ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳಾದ ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಪೇಟಿಎಂ, ಎಸ್‌ಬಿಐ, ಬ್ಯಾಂಕ್ ಆಪ್ ಬರೋಡಾ, ಸಿಟಿ ಯೂನಿಯನ್ ಬ್ಯಾಂಕ್, ಈಕ್ವಟೋಸ್ ಸ್ಮಾಲ್ ಪೈನಾನ್ಸ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಎಫ್‌ಸಿ ಬ್ಯಾಂಕ್, ಇಂಡಸ್ ಲ್ಯಾಂಡ್ ಬ್ಯಾಂಕ್, ಕರೂರು ವೈಶ್ಯ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸೌ್ ಇಂಡಿಯನ್ ಬ್ಯಾಂಕ್ ಗಳಲ್ಲಿ ಲಭ್ಯವಿದೆ.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್ಪಿಕುಮಾರ ಚಂದ್ರ, ಆರ್‌ಟಿಓ ರಾಮಕೃಷ್ಣ ರೈ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ರಮೇಶ್ ಬಾಬು ನವಯುಗದ ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News