ಜಮಾಅತ್ ಗಳಲ್ಲಿ ದಾಖಲಾತಿ ರಿಜಿಸ್ಟ್ರಿ ನಿರ್ವಹಿಸಲು ವಕ್ಫ್ ಸೂಚನೆ

Update: 2019-11-20 15:56 GMT

ಮಂಗಳೂರು, ನ.20: ದ.ಕ.ಜಿಲ್ಲೆಯ ಪ್ರತೀ  ಜಮಾಅತಿಗೊಳಪಟ್ಟ ಮುಸ್ಲಿಮರ ಎಲ್ಲಾ ದಾಖಲಾತಿಗಳನ್ನು ನಿರ್ವಹಿಸಲು ಮಸೀದಿಗಳಲ್ಲಿ ದಾಖಲಾತಿ (ರಿಜಿಸ್ಟ್ರಿ) ಪುಸ್ತಕ ಸಿದ್ಧಪಡಿಸಿಟ್ಟುಕೊಂಡು, ಜಮಾಅತ್ ವ್ಯಾಪ್ತಿಯ ಎಲ್ಲಾ ಮುಸ್ಲಿಮ್ ಮನೆಯವರ ಜನಸಂಖ್ಯೆಯ ವಿವರಗಳನ್ನು ಆ ಪುಸ್ತಕದಲ್ಲಿ ನಮೂದಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸೂಚಿಸಿದೆ.

ಇದು ಮುಂದಿನ ದಿನಗಳನ್ನು ಸರಕಾರದ ಅಂಕಿ ಅಂಶ, ಯೋಜನೆಗಳಿಗೆ ಪೂರಕವಾಗಲಿದೆ. ರಾಷ್ಟ್ರೀಯ ಪೌರತ್ವ ಕಾಯ್ದೆ 1951ರ ಪ್ರಕಾರ ರಾಷ್ಟ್ರೀಯ ಜನಸಂಖ್ಯೆ ರಿಜಿಸ್ಟ್ರಿ ನಿರ್ವಹಿಸುವುದು ಮತ್ತು ಮುಸ್ಲಿಮರ ಮನೆಗಳ ವಿವರಗಳನ್ನು ದಾಖಲಿಸುವ ವೇಳೆ ಎಲ್ಲಾ ಮುಸ್ಲಿಮ್ ಜನಸಂಖ್ಯೆಯ ವಿವರಗಳು ಲಭ್ಯವಿಲ್ಲದಿರುವುದರಿಂದ ಚುನಾವಣೆ ಸಂದರ್ಭ ಮತದಾರ ಪಟ್ಟಿಯಲ್ಲಿ ಹೆಸರು ದಾಖಲಾಗಿರುವುದಿಲ್ಲ. ಹೆಚ್ಚಿನ ಮುಸ್ಲಿಮರ ಮೂಲ ದಾಖಲೆಗಳಿಲ್ಲದ ಕಾರಣ ಪಡಿತರ ಚೀಟಿ, ಆಧಾರ್ ಕಾರ್ಡ್ ಇನ್ನಿತರ ದಾಖಲಾತಿಗಳು ಮುಸ್ಲಿಮರ ಅಸ್ತಿತ್ವದ ಬಗ್ಗೆ ದೃಢಪಡಿಸಲು ಸಾಧ್ಯವಾಗುವುದಿಲ್ಲ. ಪ್ರಕೃತಿ ವಿಕೋಪ ಮತ್ತು ಇನ್ನಿತರ ಕಾರಣಗಳಿಂದ ಮೂಲ ದಾಖಲಾತಿಗಳು ಕಾಣೆಯಾಗುವ ಸಾಧ್ಯತೆ ಇದೆ. ಹಾಗಾಗಿ ಪ್ರತಿಯೊಬ್ಬರು ತಮ್ಮ ಮೂಲ ದಾಖಲಾತಿಗಳನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವ ಅಗತ್ಯವಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಜಮಾಅತಿಗೊಳಪಟ್ಟ ಮುಸ್ಲಿಮರ ದಾಖಲಾತಿ ಪ್ರಕ್ರಿಯೆಗೆ ಜಮಾತಿನ ಆಡಳಿತ ಕಮಿಟಿಯು ಮುಂದಾಗಬೇಕು ಮತ್ತು ಪ್ರತೀ ಮುಸ್ಲಿಮ್ ಮನೆಯವರು ಈ ಬಗ್ಗೆ ಸೂಕ್ತ ಮಾಹಿತಿಗಳನ್ನು ನೀಡಿ ಸಹಕರಿಸಬೇಕು ಎಂದು ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News