ಟ್ರಂಪ್ ಪ್ರಕಾರ ಮಾಧ್ಯಮಗಳು ಮೆಲಾನಿಯಾರನ್ನು ಹೆದರಿಸಿದ್ದು ಹೀಗೆ…

Update: 2019-11-20 17:02 GMT

 ವಾಶಿಂಗ್ಟನ್, ನ. 20: “ನನ್ನ ಆರೋಗ್ಯ ಹದಗೆಟ್ಟಿದೆ ಎಂಬ ವರದಿಗಳ ಮೂಲಕ ‘ರೋಗಗ್ರಸ್ತ’ ಮಾಧ್ಯಮಗಳು ನನ್ನ ಪತ್ನಿ ಮೆಲಾನಿಯಾರನ್ನು ಹೆದರಿಸಿವೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಕೋಪದಿಂದ ಹೇಳಿದ್ದಾರೆ.

ಶನಿವಾರ ವಾಶಿಂಗ್ಟನ್ ಹೊರವಲಯದ ಸರಕಾರಿ ಆಸ್ಪತ್ರೆಯೊಂದಕ್ಕೆ ಟ್ರಂಪ್ ದಿಢೀರ್ ಭೇಟಿ ನೀಡಿದ ಬಳಿಕ, 73 ವರ್ಷದ ಅಧ್ಯಕ್ಷರ ಆರೋಗ್ಯದ ಬಗ್ಗೆ ಊಹಾಪೋಹಗಳು ಹರಡಿದ್ದವು.

ಬಳಿಕ, ತನ್ನ ವಾರ್ಷಿಕ ವೈದ್ಯಕೀಯ ತಪಾಸಣೆಯ ಭಾಗವಾಗಿ ಟ್ರಂಪ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂಬುದಾಗಿ ಶ್ವೇತಭವನವು ವಿವರಣೆ ನೀಡಿತಾದರೂ, ಅದು ಜನರ ಊಹಾಪೋಹಗಳನ್ನು ತಣಿಸಲಿಲ್ಲ.

ಆದರೆ, ನನಗೆ ಹೃದಯಾಘಾತವಾಗಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ ಎಂದು ಹೇಳುವ ಮೂಲಕ ಊಹಾಪೋಹಗಳ ಸ್ವರೂಪವನ್ನು ಟ್ರಂಪ್ ಉತ್ಪ್ರೇಕ್ಷೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News