ಪ್ರೊ ಇಂಡಿಯಾ ಮೊಯ್‌ಥಾಯ್ ಚಾಂಪಿಯನ್‌ಶಿಪ್‌ಗೆ ಚಾಲನೆ

Update: 2019-11-20 17:05 GMT

ಮಂಗಳೂರು, ನ.20: ಮೊಯ್‌ಥಾಯ್ ಅಸೋಸಿಯೇಶನ್ ಹಾಗೂ ಮಂಕಿ ಮೆಹಮ್ ಫೈಟ್ ಕ್ಲಬ್‌ಗಳ ನೇತೃತ್ವದಲ್ಲಿ ನಗರದ ಕರಾವಳಿ ಮೈದಾನದಲ್ಲಿ ಬುಧವಾರದಿಂದ ಆರಂಭವಾದ ಪ್ರೊ ಇಂಡಿಯಾ ಮೊಯ್‌ಥಾಯ್ ಚಾಂಪಿಯನ್‌ಶಿಪ್ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಕರ್ನಾಟಕದ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಡೆಯುವ ಪಂದ್ಯಾವಳಿಯಲ್ಲಿ ದೇಶದ ಮೂರು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 27 ರಾಜ್ಯಗಳ ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ಸಂತಸದ ವಿಚಾರ. ಮೊಯ್‌ಥಾಯ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿರುವ ಎಲ್ಲ ತಂಡಗಳಿಗೂ ಶುಭವಾಗಲಿ ಎಂದು ಹೇಳಿದರು.

ಮೊಯ್‌ಥಾಯ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರಾಜಗೋಪಾಲ ರೈ ಮಾತನಾಡಿ, ಬುಧವಾರದಿಂದ ಆರಂಭವಾದ ಪಂದ್ಯಾವಳಿಯು ನ.24ರವರೆಗೂ ನಡೆಯಲಿದೆ. ನ.24ರಂದು ರಾಷ್ಟ್ರ ಮಟ್ಟದ ಅತ್ಯುತ್ತಮ 10 ವೃತ್ತಿಪರ ಕುಸ್ತಿಪಟುಗಳು ಸೆಣಸಾಟ ನಡೆಸಲಿದ್ದಾರೆ. ಪಂದ್ಯಾವಳಿಯಲ್ಲಿ 27 ರಾಜ್ಯಗಳ ಸುಮಾರು 500 ಕ್ರೀಡಾಪಟುಗಳು ಭಾಗವಹಿಸಿದ್ದಾರೆ ಎಂದರು.

ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ, ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸದಾನಂದ ಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಚಾಂಪಿಯನ್‌ಶಿಪ್ ಪಂದ್ಯಾವಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಸಿ.ನಾಯ್ಕೆ, ಕೆಎಂಎಫ್ ದ.ಕ. ಜಿಲ್ಲಾ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಸುರೇಶ್ ಚಂದ್ರ ಶೆಟ್ಟಿ, ಉದ್ಯಮಿ ಕರುಣಾಕರನ್, ಜಗದೀಶ್ ಅಧಿಕಾರಿ, ಸುನೀಲ್‌ಕುಮಾರ್ ಆಚಾರ್, ಕೋಸ್ಟಲ್‌ವುಡ್ ನಟ ರೂಪೇಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ನ್ಯಾಯವಾದಿ ರಾಘವೇಂದ್ರ ರಾವ್, ಸ್ವರ್ಣಸುಂದರ್, ಬಶೀರ್ ಬೈಕಂಪಾಡಿ, ಯತೀಶ್ ಬೈಕಂಪಾಡಿ, ಸಚಿನ್ ರಾಜ್, ನಿತಿಶ್‌ಕುಮಾರ್, ಮಹೇಶ್ ಪಾಂಡೆ, ಬಾಲಕೃಷ್ಣ ಶೆಟ್ಟಿ, ಚೇತನ್ ಎಂ. ಅಶ್ವತ್ಥಾಮ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News