ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಬಾಬಾರಾಮ್ ದೇವ್ ಭೇಟಿ

Update: 2019-11-20 17:11 GMT

ಬಂಟ್ವಾಳ, ನ. 20: ಯೋಗಗುರು ಬಾಬಾರಾಮ್ ದೇವ್ ಅವರು ಬುಧವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿ, ಶಿಶುಮಂದಿರದಿಂದ ಕಾಲೇಜ್‍ವರೆಗಿನ ಮಕ್ಕಳ ಚಟುವಟಿಕೆ, ಮಕ್ಕಳ ಕೂಪಿಕ ಸಮತೋಲನ ಪ್ರದರ್ಶನವನ್ನು ವೀಕ್ಷಿಸಿದರು.

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಬಾಬಾರಾಮ್ ದೇವ್, ಮಾತೃಭಾಷೆ ಹಾಗೂ ಸಂಸ್ಕೃತ ಕಲಿಕೆಯಿಂದ ಬುದ್ಧಿ ವೃದ್ಧಿಯಾಗುತ್ತದೆ. ಮನುಷ್ಯ ಜೀವನದಲ್ಲಿ ಕರ್ಮ ಆಧಾರಿತ, ಧರ್ಮ ಆಧಾರಿತ ವ್ಯವಸ್ಥೆಗಳಿವೆ. ಕರ್ಮಾಧಾರಿತದಿಂದ ಕಲಸ ಮಾಡಿದಾಗ ಖುಷಿ ಸಿಗುತ್ತದೆ. ಸ್ವಲ್ಪವು ಕರ್ಮ ಮಾಡದವರು ರಾಕ್ಷಸ ಸ್ವಭಾವದವರು ಎಂದ ಅವರು, ತನ್ನ ಬಾಲ್ಯದ ದಿನಗಳಲ್ಲಿ ಗುರುಕುಲದಲ್ಲಿ ಪಡೆದಿರುವ ಶಿಕ್ಷಣವನ್ನು ನೆನಪಿಸಿದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಸೋಮಯಾಜಿ, ಪತಂಜಲಿಯ ಕರ್ನಾಟಕದ ಉಸ್ತುವಾರಿ ಪವನ್ ಲಾಲ್ ಆರ್ಯ, ಜಿಲ್ಲಾ ಉಸ್ತುವಾರಿ ರಾಜೇಂದ್ರ, ಸುಜಾತ ಮಂಗಳೂರು, ಕಮಲಾ ಪ್ರಭಾಕರ ಭಟ್, ಶಾಲಾ ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್.ಎನ್. ವೇದಿಕೆಯಲ್ಲಿದ್ದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಸ್ವಾಗತಿಸಿ, ವಂದಿಸಿದರು.

ಶಿಶುಮಂದಿರಕ್ಕೆ ತೆರಳಿ ಅಲ್ಲಿ ಪುಟಾಣಿ ಮಕ್ಕಳ ಚಟುವಟಿಕೆಯನ್ನು ಕಂಡು ಖುಷಿ ಪಟ್ಟರು. ವೇದವ್ಯಾಸ ಮಂದಿರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿ ನಿಯರ ದಾಂಡೀಯ ನೃತ್ಯವನ್ನು ವೀಕ್ಷಿಸಿದರು. 

ವಿದ್ಯಾರ್ಥಿಗಳೊಂದಿಗೆ ಸಂವಾದ

ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಬಾಬಾರಾಮ್ ದೇವ್ ಸಂವಾದ ನಡೆಸಿದರು. ವಿದ್ಯಾರ್ಥಿನಿ ಕ್ಷಮಾ ಪ್ರಶ್ನೆಗೆ ಉತ್ತರಿಸಿದ ಬಾಬಾ ರಾಮ್ ದೇವ್ ಪ್ರಾಣಾಯಾಮದಿಂದ ಮೆದುಳಿನ ಶಕ್ತಿ ವಿಕಸನಗೊಳ್ಳುತ್ತದೆ ಎಂದರೆ, ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ನಿಮ್ಮ ನಿಲುವೇನು ಎಂಬ ವಿದ್ಯಾರ್ಥಿ ಜಿನಿತ್ ಪ್ರಶ್ನೆಗೆ ಉತ್ತರಿಸಿದ ಅವರು, ಆಯೋಧ್ಯೆಯಲ್ಲಿಯೇ ರಾಮಮಂದಿರ ನಿರ್ಮಾಣವಾಗಲೇಬೇಕು ಎಂದರು. ಹಾಗೆಯೇ ವಿದ್ಯಾರ್ಥಿನಿ ಅಮೃತಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು  ದೇಶದ ಸುಮಾರು 15 ಲಕ್ಷ ಕೋ.ರೂ.ವಿದೇಶಿ ಕಂಪೆನಿಗಳಿಗೆ ನೇರ ಹೋಗುತಿತ್ತು. ಈ ಸಂದರ್ಭ ಸ್ವದೇಶಿ ಉತ್ಪನ್ನದ ಅಭಿಯಾನ ಆರಂಭಿಸಿದ್ದು, ಪತಂಜಲಿ ಉತ್ಪನ್ನಗಳ ತಯಾರಿಕೆಯಿಂದ ದೇಶಕ್ಕೆ ಆದಾಯ ಬರುವಂತಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News