ನ. 24: ಉಳ್ಳಾಲದ ನದಿ ಸಂಪನ್ಮೂಲಗಳ ಸಂರಕ್ಷಣೆಗೆ ಸ್ವಚ್ಛತಾ ಕಾರ್ಯಕ್ರಮ

Update: 2019-11-20 17:12 GMT

ಮಂಗಳೂರು, ನ.20: ನಾಶವಾಗುತ್ತಿರುವ ನದಿ ಸಂಪನ್ಮೂಲಗಳನ್ನು ಸಂರಕ್ಷಿಸಿ, ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಳ್ಳಾಲ ಉಳಿಯ ಪರಿಸರದ ನಿವಾಸಿಗಳು, ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ಧಾರ್ಮಿಕ ಮುಖಂಡರುಗಳ ನೇತೃತ್ವದಲ್ಲಿ ಜನಜಾಗೃತಿಗಾಗಿ ಸ್ವಚ್ಛತಾ ಕಾರ್ಯಕ್ರಮವು ನ.24ರಮದು ಅಪರಾಹ್ನ 2:30ಕ್ಕೆ ನದಿ ಪರಿಸರದಲ್ಲಿ ನಡೆಯಲಿದೆ.

ಉಳ್ಳಾಲ ನಗರಸಭಾ ವ್ಯಾಪ್ತಿಗೊಳಪಟ್ಟ ಉಳಿಯ, ಹೊಯಿಗೆ, ಮಾರ್ಗತ್ತಲೆ, ಕಟ್ಟತ್ತಲೆ, ಕಕ್ಕೆತೋಟ, ಪಾಂಡೆಲ್ಪಕ್ಕ, ಕೊಟ್ಟಾರ, ಕೋಡಿ, ಕೋಟೆಪುರ ಮತ್ತಿತರ ನದಿ ತೀರ ಪ್ರದೇಶಗಳನ್ನು ಕೇಂದ್ರವಾಗಿಟ್ಟು ಸ್ವಚ್ಛತಾ ಕಾರ್ಯಕ್ರಮವು ಹಂತ ಹಂತವಾಗಿ ನಡೆಸಲಾಗುವುದು.

ಮೊದಲ ಹಂತದಲ್ಲಿ ಮಂಜನಕುದ್ರು ಪರಿಸರದ ಶ್ರೀಬಾಲ ಮಾರುತಿ ವ್ಯಾಯಾಮ ಶಾಲೆಯ ಬಳಿ ಸ್ವಯಂ ಸೇವಕರು ಸೇರಿಕೊಂಡು ಯೋಜಿತ ತಂಡಗಳ ರೂಪದಲ್ಲಿ ಸಮಿತಿಯು ಸೂಚಿಸುವ ವಿವಿಧ ಪ್ರದೇಶಗಳಲ್ಲಿ ಸ್ಚಚ್ಛತಾ ಕಾರ್ಯಕ್ರಮ ನಡೆಸಲಾಗುವುದು. ಉಳಿಯ ಕೋಳಿಕಟ್ಟ ಮೈದಾನದಲ್ಲಿ ಶ್ರಮದಾನವು ಸಮಾರೋಪಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News