ಸೋಶಿಯಲ್ ಫೋರಮ್- ಲುಲು ಸಂಸ್ಥೆಯಿಂದ ಮಕ್ಕಳ ದಿನಾಚರಣೆ

Update: 2019-11-20 17:26 GMT

ದಮಾಮ್ :  ಇಂಡಿಯನ್ ಸೋಶಿಯಲ್ ಫೋರಂ(ISF) ಖೋಬಾರ್, ಕರ್ನಾಟಕ ಘಟಕ ಮತ್ತು ಲುಲು ಹೈಪರ್ ಮಾರ್ಕೆಟ್ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆ ಪ್ರಯುಕ್ತ 'ಆರ್ಟ್ ಬೀಟ್-2019' ಕಾರ್ಯ ಕ್ರಮವನ್ನು ಸೌದಿ ಅರೇಬಿಯಾದ ಖೋಬಾರ್ ನಗರದಲ್ಲಿರುವ ಲುಲು ಹೈಪರ್ ಮಾರ್ಕೆಟ್  ಸಭಾಂಗಣದಲ್ಲಿ  ನಡೆಸಲಾಯಿತು.

ಮಕ್ಕಳಿಗಾಗಿ ವಿಶೇಷವಾಗಿ ಆಯೋಜಿಸಲಾಗಿದ್ದ ಚಿತ್ರಗಳಿಗೆ ಬಣ್ಣ ಹಚ್ಚುವ ಸ್ಪರ್ಧೆಯಲ್ಲಿ ನೂರಕ್ಕೂ ಅಧಿಕ ಅನಿವಾಸಿ ಭಾರತೀಯ ಮಕ್ಕಳು ಭಾಗವಹಿಸಿದರು. ಭಾರತದ ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾಗಿರುವ ಮಕ್ಕಳ ದಿನಾಚರಣೆಯ ಉದ್ದೇಶ ಮತ್ತು‌ ಹಿನ್ನೆಲೆಯನ್ನು ಸಾರುವ ಕಿರು ಚಿತ್ರವನ್ನು ಇದೇ ವೇದಿಕೆಯಲ್ಲಿ ಪ್ರದರ್ಶಿಸಲಾಯಿತು. 

ಕಾರ್ಯ ಕ್ರಮದಲ್ಲಿ ನಡೆಸಿದ  ರಸ‌ ಪ್ರಶ್ನೆಗಳು ಮತ್ತು ಹಾಸ್ಯ ಚಟಾಕಿಗಳು ಮಕ್ಕಳನ್ನು ರಂಜಿಸಿದವು. ಬಣ್ಣದ ಚಿತ್ತಾರ ಸ್ಪರ್ಧೆಯಲ್ಲಿ ಪಾರ್ಥನ್ ರತೀಶ್ ಪ್ರಥಮ, ಶ್ರಾವಣ್ ಶಾಜನ್ ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ದರ್ಶಿತಾ ಪಡೆದುಕೊಂಡರು ಹಾಗು ಭಾಗವಹಿಸಿದ ಎಲ್ಲ ಚಿಣ್ಣರಿಗೂ ಬಹುಮಾನ ವಿತರಿಸಿ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಯಿತು. 

 
ಮಕ್ಕಳ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರೆನಾಲ್ಟ್‌ ಸಂಸ್ಥೆಯ ಜನರಲ್ ಮ್ಯಾನೇಜರ್ ಸಲಾಹುದ್ದೀನ್ ತುಮಕೂರು, ಲುಲು ಹೈಪರ್ ಮಾರ್ಕೆಟ್ ಖೋಬಾರ್ ಜನರಲ್ ಮ್ಯಾನೇಜರ್‌ ಮುಹಮ್ಮದ್ ರಾಫಿ , ಹಣಕಾಸು ನಿರ್ವಾಹಕ ಅಬ್ದುರ್ರಹ್ಮಾನ್, ಇಂಡಿಯನ್ ಸೋಶಿಯಲ್ ಫೋರಂ ರಾಜ್ಯಾಧ್ಯಕ್ಷ ಮುಹಮ್ಮದ್ ಶರೀಫ್ , ಇಂಡಿಯಾ ಫ್ರಟರ್ನಿಟಿ ಫೋರಂ ಪ್ರಧಾನ  ಕಾರ್ಯದರ್ಶಿ ಸಾಜಿದ್ ವಳವೂರು ಮತ್ತು ಇಂಡಿಯನ್ ಸೋಶಿಯಲ್ ಫೋರಂ ಖೋಬಾರ್ ಕಾರ್ಯದರ್ಶಿ ಝಕೀರ್ ಬೆಂಗಳೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಫಾಹಿಮ್ ನಿರೂಪಿಸಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News