ನ. 25-ಡಿ.3;ಸುರತ್ಕಲ್ ವಿದ್ಯಾದಾಯಿನೀ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ

Update: 2019-11-20 17:46 GMT

ಮಂಗಳೂರು, ನ.20: ಸ್ವಾತಂತ್ರ ಪೂರ್ವದಲ್ಲಿ 1916ರಲ್ಲಿ ಆರಂಭಗೊಂಡ ಹಿಂದು ವಿದ್ಯಾದಾಯಿನೀ ಸಂಘದ ಮೂಲಕ ಸ್ಥಾಪನೆಯಾದ ವಿದ್ಯಾದಾಯಿನಿ ಶಿಕ್ಷಣ ಸಂಸ್ಥೆಗಳಿಗೆ 75 ವರ್ಷ ತುಂಬುತ್ತಿರುವ ಸಂದರ್ಭ ಅಮೃತ ಮಹೋತ್ಸವನ್ನು ಆಚರಿಸಲು ತೀರ್ಮಾನಿಸಲಾಗಿದೆ ಎಂದು ಹಿಂದು ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಯಂ.ವೆಂಕಟ್ರಾವ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಅಮೃತೋತ್ಸವದ ಪ್ರಯುಕ್ತ ನ. 25ರಿಂದ ಡಿಸೆಂಬರ್ 3ರವರೆಗೆ ವಿವಿಧ ಕಾರ್ಯಕ್ರಮಗಳುಯ ನಡೆಯಲಿದೆ. ಪ್ರಸ್ತುತ 6 ವಿದ್ಯಾ ಸಂಸ್ಥೆಗಳನ್ನು ಹೊಂದಿರುವ ವಿದ್ಯಾದಾಯಿನಿ ಸಂಘ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರದ ವರೆಗೆ 3,415 ಮಂದಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಕನ್ನಡ ಮಾಧ್ಯಮದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.1991ರಲ್ಲಿ ಆರಂಭವಾದ ಆಂಗ್ಲ ಮಾಧ್ಯಮ ಶಾಲೆಯಲ್ಲೂ ಸಾಕಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅಮೃತ ಮಹೋತ್ಸವದ ಅಂಗವಾಗಿ ಪ್ರೌಢ ಶಾಲಾ ಕಟ್ಟದ ನವೀಕರಣ ,ಉದ್ಯಾನವನ,ಪ್ರಯೋಗಾಲಯ ,ದ್ರಶ್ಯ ಶ್ರಾವ್ಯ ಮಂದಿರದ ಆಧುನೀಕರಣ, ಕಂಪ್ಯೂಟರ್ ಕೇಂದ್ರದ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ತರಬೇತಿ ಕೊಠಡಿ ನಿರ್ಮಾಣ 25.ಕೆ.ವಿ ಜನರೇಟರ್ ಕೊಠಡಿ ನಿರ್ಮಾಣ ಸೇರಿದಂತೆ ಸಾಂಸ್ಕೃತಿಕ , ಸಾಹಿತಿಕ ವಸ್ತು ಪ್ರದರ್ಶನ ಕಾರ್ಯಕ್ರಮ, ಜಿಲ್ಲಾ ಮಟ್ಟದ ಕ್ರೀಡಾಕೂಟ, ಅಮೃತ ಮಹೋತ್ಸವ ಸವಿ ನೆನಪಿನ ಸಂಚಿಕೆಯನ್ನು ಹೊರತರುವ ಯೋಜನೆಗಳನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೆಂಕಟ್ರಾವ್ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಹಿಂದು ವಿದ್ಯಾದಾಯಿನಿ ಸಂಘದ ಜೊತೆ ಕಾರ್ಯದರ್ಶಿ ಟಿ.ಎನ್.ರಮೇಶ್,ಜೊತೆ ಕಾರ್ಯದರ್ಶಿ ಶ್ರೀರಂಗ ಎಚ್, ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾಕರ ರಾವ್ ಪೇಜಾವರ, ಅನುದಾನಿತ ವಿದ್ಯಾದಾಯಿನಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಲಚಂದ್ರ ಕೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News