ಮಂಗಳೂರು: ‘ರಾಜಧಾನಿ’ ಚಿನ್ನಾಭರಣ ಮಳಿಗೆ ಶುಭಾರಂಭ

Update: 2019-11-21 15:58 GMT

ಮಂಗಳೂರು, ನ.21: ಚಿನ್ನ ಮತ್ತು ವಜ್ರಾಭರಣಕ್ಕೆ ಹೆಸರುವಾಸಿಯಾಗಿರುವ ‘ರಾಜಧಾನಿ’ ಚಿನ್ನಾಭರಣ ಮಳಿಗೆಯು ನಗರದ ಸೆಂಟ್ರಲ್ ಮಾರ್ಕೆಟ್ ರಸ್ತೆಯ ಮಂಗಳಾ ಶಾಪಿಂಗ್ ಆರ್ಕೇಡ್‌ನಲ್ಲಿ ಗುರುವಾರ ಶುಭಾರಂಭಗೊಂಡಿತು.

ಸೈಯದ್ ಕುಟುಂಬದ ಕೆ.ಎಸ್. ಸೈಯದ್ ಅಲಿ ತಂಙಳ್ ಕುಂಬೋಳ್ ಮಳಿಗೆಯನ್ನು ಉದ್ಘಾಟಿಸಿ ದುಆಗೈದರು. ಬಳಿಕ ಮಾತನಾಡಿದ ಅವರು ಚಿನ್ನ ಮತ್ತು ವಜ್ರಾಭರಣ ಹಾಗೂ ಬೆಳ್ಳಿ, ವಾಚ್‌ಗೆ ಪ್ರಸಿದ್ಧಿ ಪಡೆದಿರುವ ‘ರಾಜಧಾನಿ’ ಚಿನ್ನಾಭರಣ ಮಳಿಗೆಯು ಈಗಾಗಲೆ ಗ್ರಾಹಕರ ಸಂತೃಪ್ತಿಗೆ ಪಾತ್ರವಾಗಿದೆ. ಮುಂದೆಯೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಮತ್ತಷ್ಟು ಪ್ರಸಿದ್ಧಿ ಪಡೆಯಲಿ ಎಂದು ಹಾರೈಸಿದರು.

ಮಸ್ಜಿದುನ್ನೂರ್‌ನ ಇಮಾಮ್ ಯೂಸುಫ್ ಖಾಸಿಮಿ ಮುಖ್ಯ ಅತಿಥಿಯಾಗಿದ್ದರು.

‘ರಾಜಧಾನಿ’ ಚಿನ್ನಾಭರಣ ಮಳಿಗೆಯ ಮಾಲಕ ಅಶ್ರಫ್ ಕೆ., ಸಹೋದರ ಹಾರಿಸ್ ಕೆ. ವಯನಾಡು, ಪುತ್ರ ನಾಝಿಲ್, ನಾಸರ್ ಹಾಜಿ ವಯನಾಡು, ಅಶ್ರಫ್ ಕಲ್ಲೇರಿ ವಯನಾಡು, ಮುಹಮ್ಮದ್ ಹನೀಫ್ ಸಾಗರ್, ಹಾಜಿ ಎ. ಇಬ್ರಾಹೀಂ ಮಂಜನಾಡಿ ಬಂಡಸಾಲೆ, ಇಸಾಕ್ ಹಾಜಿ ಸುಳ್ಯ, ಸಂಶುದ್ದೀನ್ ಕೋಡಿಕಲ್, ಮ್ಯಾನೇಜರ್ ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.

*ಹೊಸಂಗಡಿ, ತೊಕ್ಕೊಟ್ಟು, ಸುರತ್ಕಲ್, ಫರಂಗಿಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ರಾಜಧಾನಿ ಚಿನ್ನಾಭರಣ ಮಳಿಗೆಯು ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ತನ್ನ ಶಾಖೆಯನ್ನು ತೆರೆದಿದೆ.

*ಮಳಿಗೆಯ ಶುಭಾರಂಭದ ಪ್ರಯುಕ್ತ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸದಸ್ಯರಿಗೆ ‘ಚಿನ್ನ’ ಗೆಲ್ಲುವ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಗುರುವಾರ ಪೂರ್ವಾಹ್ನ ನಡೆಸಲಾದ ಪ್ರಥಮ ಡ್ರಾದಲ್ಲಿ ‘ಸಂಜನಾ ಬಜಾಲ್’ ಅದೃಷ್ಟಶಾಲಿಯಾದರು. ಇವರಿಗೆ ಮಳಿಗೆಯ ಮಾಲಕ ಅಶ್ರಫ್ ಮತ್ತು ಅವರ ಪತ್ನಿ ಶಹೀನ ವಜ್ರದ ಉಂಗುರವನ್ನು ಹಸ್ತಾಂತರಿಸಿದರು.

*ಷರತ್ತುಗಳ ಅನ್ವಯದೊಂದಿಗೆ ಶೇ.3ರ ಮೇಕಿಂಗ್ ಚಾರ್ಜ್ ರಿಯಾಯಿತಿ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News