ಉಡುಪಿ : ಕೆಎಸ್ಸಾರ್ಟಿಸಿ ದೈನಂದಿನ ಬಸ್‌ಪಾಸ್ ಲಭ್ಯ

Update: 2019-11-21 14:06 GMT

ಉಡುಪಿ, ನ. 21: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಕೈಗೆಟಕುವ ದರದಲ್ಲಿ ಸಾರಿಗೆ ಸೌಲಭ್ಯವನ್ನು ನೀಡುತಿದ್ದು, ಇತ್ತೀಚೆಗೆ ಸಾರಿಗೆ ಬಸ್ಸುಗಳಲ್ಲಿ ನೂತನವಾಗಿ ಕುಂದಾಪುರ-ಉಡುಪಿ ಹಾಗೂ ಉಡುಪಿ- ಮಂಗಳೂರು ಮಾರ್ಗದಲ್ಲಿ ದುಂಡು ಸುತ್ತುವಳಿ ಪ್ರಯಾಣಕ್ಕೆ ದೈಂದಿನ ಪಾಸುಗಳನ್ನು ಪರಿಚಯಿಸಿದೆ.

ಸಾರ್ವಜನಿಕರು ಈ ಸೌಲಭ್ಯದ ಲಾಭ ಪಡೆದುಕೊಳ್ಳಬಹುದಾಗಿದೆ. ಈ ಪಾಸುಗಳನ್ನು ಕುಂದಾಪುರ, ಉಡುಪಿ ಹಾಗೂ ಮಂಗಳೂರು ಬಸ್‌ನಿಲ್ದಾಣ ಗಳಲ್ಲಿ ಹಾಗೂ ಕುಂದಾಪುರ ಘಟಕ, ಉಡುಪಿ ಘಟಕ ಹಾಗೂ ಮಂಗಳೂರು ಘಟಕದ ಬಸ್ಸುಗಳಲ್ಲಿ ಪಡೆಯಬಹುದಾಗಿದೆ.

ಈ ಪಾಸನ್ನು ದಿನದಲ್ಲಿ ಒಂದು ದುಂಡು ಸುತ್ತುವಳಿ ಪ್ರಯಾಣಕ್ಕೆ ಕುಂದಾಪುರ-ಉಡುಪಿ ಹಾಗೂ ಉಡುಪಿ-ಮಂಗಳೂರು ಮಾರ್ಗಕ್ಕೆ ಪರಿಚಯಿಸಿದ್ದು, ಪಾಸಿನ ದರಪಟ್ಟಿ ಕುಂದಾಪುರ-ಉಡುಪಿ ಮಾರ್ಗಕ್ಕೆ 70 ರೂ. ಹಾಗೂ ಉಡುಪಿ-ಮಂಗಳೂರು ಮಾರ್ಗಕ್ಕೆ 100 ರೂ.ಗಳು.

ಇದರ ಮಾಸಿಕ ಪಾಸುಗಳು ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಕುಂದಾಪುರ ಬಸ್‌ನಿಲ್ದಾಣ ದೂ.ಸಂಖ್ಯೆ: 08254-230915, ಮೊಬೈಲ್ ಸಂಖ್ಯೆ: 9663266009, ಉಡುಪಿ ಬಸ್ ನಿಲ್ದಾಣ ದೂ.ಸಂಖ್ಯೆ: 0820-2526243, ಮೊಬೈಲ್: 9663266400, ಮಂಗಳೂರು ಬಸ್ ನಿಲ್ದಾಣ ದೂ.ಸಂಖ್ಯೆ: 0824-2211243, ಮೊಬೈಲ್: 7760990720ನ್ನು ಸಂಪರ್ಕಿಸುವಂತೆ ಕೆಎಸ್‌ಆರ್‌ಟಿಸಿ ಕುಂದಾಪುರ ಘಟಕ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News