ವಿಶ್ವ ರಸ್ತೆ ಸಂಚಾರಿ ಸಂತ್ರಸ್ತರನ್ನು ಸ್ಮರಿಸುವ ದಿನಾಚರಣೆ
Update: 2019-11-21 20:04 IST
ಮಲ್ಪೆ, ನ.21: ರೋಟರಿ ಅಂಬಲಪಾಡಿ, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಸ್ತೆ ಸಂಚಾರಿ ಸಂತ್ರಸ್ತರನ್ನು ಸ್ಮರಿಸುವ ದಿನವನ್ನು ಮಲ್ಪೆಬೀಚ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಸಹಿ ಮಾಡುವುದರೊಂದಿಗೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಕರಪತ್ರವನ್ನು ಬಿಡುಗಡೆಗೊಳಿಸಲಾಯತು.
ಸಮಾರಂಭದಲ್ಲಿ ರೋಟರಿ ಗವರ್ನರ್ ಬಿ.ಎನ್.ರಮೇಶ್, ಸಹಾಯಕ ಗವರ್ನರ್ ಅಶೋಕ್ ಕುಮಾರ್ ಶೆಟ್ಟಿ, ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್, ವಲಯ ಸೇನಾಧಿಕಾರಿ ದೇವದಾಸ್ ಶೆಟ್ಟಿಗಾರ್, ನಗರಸಭಾ ಸದಸ್ಯೆ ಲಕ್ಷ್ಮೀ ಮಂಜುನಾಥ್, ಅಂಬಲಪಾಡಿ ರೋಟರಿ ಅಧ್ಯಕ್ಷ ದುರ್ಗಾ ಪ್ರಸಾದ್, ಕಾರ್ಯದರ್ಶಿ ಮಹೇಂದ್ರ ಮೊಲಾದವರು ಉಪಸ್ಥಿತರಿದ್ದರು.