×
Ad

ತೆಂಗಿನ ತೋಟಗಳ ಪುನ:ಶ್ಚೇತನಕ್ಕೆ ಸಹಾಯ ಧನ

Update: 2019-11-21 20:57 IST

ಉಡುಪಿ, ನ.21:ಹಳೆಯ, ಅನುತ್ಪಾದಕ, ಕೀಟ-ರೋಗ ಬಾಧಿತ, ತೇವಾಂಶ ಮತ್ತು ಪೋಷಕಾಂಶ ಕೊರತೆ ಇರುವ ಹಾಗೂ ಹವಾಮಾನ ವೈಪರೀತ್ಯದಿಂದ ಇಳುವರಿ ಕುಂಠಿತವಾಗಿರುವ ತೆಂಗಿನ ತೋಟಗಳಲ್ಲಿ ಪುನ: ಹೊಸದಾಗಿ ತೆಂಗಿನ ಸಸಿಗಳನ್ನು ನೆಡುವುದು, ಪುನ:ಶ್ಚೇತನ ಮಾಡುವ ಹಾಗೂ ಸಮಗ್ರ ನೀರು, ಮಣ್ಣು ಹಾಗೂ ಪೋಷಕಾಂಶ ನಿರ್ವಹಣಾ ಪದ್ದತಿಯನ್ನು ಕೈಗೊಳ್ಳುವ ರೈತರಿಗೆ ಒಟ್ಟು ವೆಚ್ಚದ ಶೇ.50ರಂತೆ ಗರಿಷ್ಠ 53,500 ರೂ. ಸಹಾಯಧನ ನೀಡುವ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರತಿ ಹೆಕ್ಟೇರ್‌ಗೆ ಸಹಾಯಧನ ಲಭ್ಯವಿದ್ದು 2 ಕಂತುಗಳಲ್ಲಿ (ಮೊದಲ ವರ್ಷ 44750ರೂ., 2ನೇ ವರ್ಷ 8750ರೂ.) ನೀಡಲು ಅವಕಾಶವಿದೆ. ಪ್ರತಿ ಫಲಾನುಭವಿಗೆ ಕನಿಷ್ಠ 0.4ಹೆಕ್ಟೇರ್‌ನಿಂದ ಗರಿಷ್ಠ ಒಂದು ಹೆಕ್ಟೇರ್‌ವರೊ ಸಹಾಯಧನ ನೀಡಲಾಗುವುದು.

ಆಸಕ್ತ ರೈತರು ಹೊಸ ಪಹಣಿ, ಆಧಾರ್‌ಕಾರ್ಡ್ ಪ್ರತಿ ಹಾಗೂ ಅರ್ಜಿಯನ್ನು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿಲ್ಲಾ ಪಂಚಾಯತ್ ಇವರಿಗೆ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನ.30 ಕೊನೆ ದಿನ. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಉಡುಪಿ ದೂರವಾಣಿ: 0820-2531950, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿ.ಪಂ) ಉಡುಪಿ ದೂರವಾಣಿ: 0820-2522837, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಕುಂದಾಪುರ ದೂರವಾಣಿ: 08254-230813, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಕಾರ್ಕಳ ದೂರವಾಣಿ: 08258-230288ನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News