'ಅವಧಿ ಪೂರ್ವ ಜನಿಸಿದ ಶಿಶುವಿಗೆ ವಿಶೇಷ ಆರೈಕೆ ಅಗತ್ಯ'

Update: 2019-11-21 16:17 GMT

ಉಡುಪಿ, ನ.21: ಜಗತ್ತಿನಾದ್ಯಂತ ಪ್ರತಿ ವರ್ಷ 15 ಮಿಲಿಯ ಶಿಶುಗಳು ಜನಿಸುತಿದ್ದು, ಇದರಲ್ಲಿ ಒಂದು ಮಿಲಿಯಕ್ಕಿಂತಲೂ ಅಧಿಕ ಅವಧಿಪೂರ್ವ ಶಿಶುಗಳಾಗಿವೆ. ಅವಧಿ ಪೂರ್ವ ಜನಿಸುವ ಶಿಶುಗಳಲ್ಲಿ ಹತ್ತನೇ ಒಂದು ಪಾಲು ಮರಣ ಹೊಂದುವುದು ಅಥವಾ ಮೆದುಳಿನ ತೊಂದರೆಗೆ ಒಳಗಾಗುವ ಸಂಭವ ಹೆಚ್ಚಿರುತ್ತದೆ. ಇದನ್ನು ತಡೆಯಲು ಅವಧಿ ಪೂರ್ವ ಜನಿಸಿದ ಮಗುವಿಗೆ ಸೂಕ್ತ ಸಮಯದಲ್ಲಿ ಅತ್ಯುತ್ತಮ ಚಿಕಿತ್ಸೆಯೊಂದಿಗೆ ವಿಶೇಷ ಆರೈಕೆಯ ಅಗತ್ಯವಿರುತ್ತದೆ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ನವಜಾತ ಶಿಶು ಘಟಕದ ಮುಖ್ಯಸ್ಥರಾದ ಡಾ.ಲೆಸ್ಲಿ ಲೂಯಿಸ್ ಹೇಳಿದ್ದಾರೆ.

ಮಣಿಪಾಲದ ಮಣಿಪಾಲ್ ಕಾಲೇಜ್ ಅಫ್ ನರ್ಸಿಂಗ್ ಹಾಗೂ ಮಣಿಪಾಲ ಕೆಎಂಸಿ ಆಸ್ಪತ್ರೆಯ ಮಕ್ಕಳ ವಿಭಾಗ ಜಂಟಿಯಾಗಿ ಹಮ್ಮಿಕೊಂಡ ವಿಶ್ವ ಅವಧಿ ಪೂರ್ವ ಜನಿಸಿದ ಶಿಶುಗಳ ದಿನಾಚರಣೆಯಲ್ಲಿ ಅವರು ಮಾತನಾಡುತಿದ್ದರು.

ಅವಧಿ ಪೂರ್ವದಲ್ಲಿ ಜನಿಸಿದ ಮಗುವಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಯೊಂದಿಗೆ ತಾಯಿಯ ಆರೈಕೆಯ ಅಗತ್ಯವಿರುತ್ತದೆ. ಅವಳ ಸೌಮ್ಯ ಸ್ಪರ್ಶ, ತಾಯಿಯ ಹಾಲಿನ ಅಗತ್ಯತೆಯೊಂದಿಗೆ ಸೋಂಕುವಿನಿಂದ ತಡೆಗಟ್ಟಲು ಶುಚಿತ್ವ ಕಾಪಾಡಿಕೊಳ್ಳುವುದು, ಸೋಂಕು ಹೊಂದಿದವರಿಂದ ಮಗುವನ್ನು ದೂರವಿರಿಸು ವುದು ಹಾಗೂ ಸಮಯಕ್ಕೆ ಸರಿಯಾಗಿ ಅರೊಗ್ಯ ತಪಾಸಣೆಯೂ ಮುಖ್ಯ ವಾಗುತ್ತದೆ ಎಂದು ಡಾ.ಲೆಸ್ಲಿ ನುಡಿದರು.

ಅವಧಿ ಪೂರ್ವದಲ್ಲಿ ಜನಿಸಿದ ಮಗುವಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಯೊಂದಿಗೆ ತಾಯಿಯ ಆರೈಕೆಯ ಅಗತ್ಯವಿರುತ್ತದೆ. ಅವಳ ಸೌಮ್ಯ ಸ್ಪರ್ಶ, ತಾಯಿಯ ಹಾಲಿನ ಅಗತ್ಯತೆಯೊಂದಿಗೆ ಸೋಂಕುವಿನಿಂದ ತಡೆಗಟ್ಟಲು ಶುಚಿತ್ವ ಕಾಪಾಡಿಕೊಳ್ಳುವುದು, ಸೋಂಕು ಹೊಂದಿದವರಿಂದ ಮಗುವನ್ನು ದೂರವಿರಿಸು ವುದು ಹಾಗೂ ಸಮಯಕ್ಕೆ ಸರಿಯಾಗಿ ಅರೊಗ್ಯ ತಪಾಸಣೆಯೂ ಮುಖ್ಯ ವಾಗುತ್ತದೆ ಎಂದು ಡಾ.ಲೆಸ್ಲಿ ನುಡಿದರು. ಸರಿಯಾದ ಆರೈಕೆ, ಸೂಕ್ತ ಚಿಕಿತ್ಸೆಯಿಂದ ಈ ಮಕ್ಕಳೂ ಇತರ ಸಾಮಾನ್ಯ ಮಕ್ಕಳಂತೆ ಬೆಳೆಯಲು ಸಾಧ್ಯವಿದೆ. ಹುಟ್ಟಿದಾಗ 500 ಗ್ರಾಮ್‌ಗಿಂತಲೂ ಕಡಿಮೆ ತೂಕದ ಹಾಗೂ ಗರ್ಭಾವಸ್ಥೆ ಸಮಯದ ಆರು ತಿಂಗಳ ಮೊದಲು ಜನಿಸಿದ ಮಗು ಸಹ ಇತರ ಎಲ್ಲಾ ಮಕ್ಕಳಂತೆ ಬೆಳವಣಿಗೆಯನ್ನು ಪಡೆಯಲು ಸಾಧ್ಯ ಎಂದು ಡಾ.ಲೆಸ್ಲಿ ಲೂಯಿಸ್ ನುಡಿದರು.

ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್‌ನ ಸಹಾಯ ಪ್ರಾಧ್ಯಾಪಕರಾದ ಯಶೋದ ಸತೀಶ್ ಹಾಗೂ ಬಿನು ಮಾರ್ಗರೆಟ್ ಅವರು ಸಹ ನೆರೆದ ಹೆತ್ತವರು ಹಾಗೂ ಪೋಷಕರಿಗೆ ಈ ಸಂಬಂಧದಲ್ಲಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ನರ್ಸಿಂಗ್ ಕಾಲೇಜಿನ ಸಹಾಯಕ ಡೀನ್ ಡಾ. ಜೂಡಿತ್ ನೊರೊನ್ಹಾ, ಮಕ್ಕಳ ಶುಷ್ರೂಷ ವಿಭಾಗದ ಡಾ. ಬೇಬಿ ಎಸ್. ನಾಯಕ್, ನವಜಾತ ಶಿಶುವಿವಿನ ಘಟಕದ ಡಾ.ಜಯಶ್ರೀ ಹಾಗೂ ಡಾ. ಅಪೂರ್ವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News