ಕೋಳಿ ಅಂಕ: ನಾಲ್ವರ ಬಂಧನ

Update: 2019-11-21 16:28 GMT

ಕೊಲ್ಲೂರು, ನ.21: ಕೆರಾಡಿ ಕುಳ್ಳಂಬಳ್ಳಿ ಚಪ್ಪರ್ಕ ಎಂಬಲ್ಲಿರುವ ಹಾಡಿಯಲ್ಲಿ ನ.20ರಂದು ಕೋಳಿ ಅಂಕ ನಡೆಸುತ್ತಿದ್ದ ನಾಲ್ವರನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ.

ಗುಲ್ವಾಡಿಯ ಲೋಕೇಶ(25), ತಲ್ಲೂರಿನ ಅನಿಲ್ ಕುಮಾರ್(36), ಸಿದ್ದಾಪುರದ ಬಾಲಯ್ಯ ಪೂಜಾರಿ(58), ಎಡಮೊಗ್ಗೆಯ ನಾಗು ನಾಯ್ಕ (56) ಬಂಧಿತ ಆರೋಪಿಗಳು. ಇವರಿಂದ ಎಂಟು ಕೋಳಿ ಹುಂಜಗಳು, ನಾಲ್ಕು ಬಾಳುಕತ್ತಿ, ಹಾಗೂ 1,850ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News